ಕೊರೋನ ಮುಕ್ತ ಸಮಾಜಕ್ಕಾಗಿ 42 ಕಿ.ಮೀ ಉರುಳು ಸೇವೆ ಮಾಡಿದ ಸ್ವಾಮೀಜಿ !

ಧಾರವಾಡ, ನ.14: ಕೊರೋನ ಮುಕ್ತ ಸಮಾಜಕ್ಕಾಗಿ ಸ್ವಾಮೀಜಿ ಹಾಗೂ ಅವರ ಸಹಾಯಕ 42 ಕಿ.ಮೀ ಉರುಳು ಸೇವೆ ಮಾಡಿ ವಿನೂತನವಾಗಿ ಪ್ರಾರ್ಥಿಸಿದ್ದಾರೆ.
ಶ್ರೀಮೈಲಾರ ಸ್ವಾಮೀಜಿ ಹಾಗೂ ಸಹಾಯಕ ರಮೇಶ್ ಉರುಳು ಸೇವೆ ಮಾಡಿದ್ದಾರೆ. ತಬಕದಹೊನ್ನಳ್ಳಿ ಗ್ರಾಮದಿಂದ ಧಾರವಾಡ ರಾಜೀವ್ ಗಾಂಧಿ ನಗರದವರೆಗೆ ಉರುಳು ಸೇವೆ ಮಾಡಲಾಗಿದೆ.
ರಾಜೀವ್ ಗಾಂಧಿ ನಗರದ ಎಣ್ಣೆ ಹೊಳೆಮ್ಮದೇವಿ ದೇವಸ್ಥಾನಕ್ಕೆ ಉರುಳು ಸೇವೆ ಮೂಲಕ ಆಗಮಿಸಿದ್ದು, 42 ಕಿ.ಮೀ ಉರುಳು ಸೇವೆಯ ಕಠಿಣ ವೃತ್ತದ ಮೂಲಕ ಕೊರೋನ ಮುಕ್ತಿಗಾಗಿ ಪ್ರಾರ್ಥನೆ ಮಾಡಿದ್ದಾರೆ.
Next Story





