ಉದ್ಯಮಿಯ ಅಪಹರಣ ಪ್ರಕರಣ: ಐವರು ಆರೋಪಿಗಳ ಬಂಧನ

ಕಲಬುರಗಿ, ನ.15: ನಗರದ ದಾಲ್ ಮಿಲ್ ಮಾಲಕರೊಬ್ಬರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರ ಆರೋಪಿಗಳನ್ನು ಚೌಕ್ ಪೊಲೀಸರು ಬಂಧಿಸಿದ್ದಾರೆ.
ಜೇವರ್ಗಿ ಮೂಲದವರಾಗಿರುವ ಸಿರಾಜುದ್ದೀನ್, ಮುಹಮ್ಮದ್ ಯೂನಸ್, , ಮುಹಮ್ಮದ್ ಹಫೀಝ್, ಖ್ವಾಜಾ ಹುಸೇನ್ ಹಾಗೂ ಮುಹಮ್ಮದ್ ಜಾವೇದ್ ಬಂಧಿತ ಆರೋಪಿಗಳು.
ಇಲ್ಲಿನ ನೆಹರು ಗಂಜ್ ಪ್ರದೇಶದ ಎಪಿಎಂಸಿ ಹತ್ತಿರದ ದಾಲ್ ಮೀಲ್ಸ್ ಮಾಲಕ ಹನುಮಂತರಾಯ್ ಮಾಲಿ ಪಾಟೀಲ್ ಎಂಬವರನ್ನು ತಂಡವೊಂದು ನ.13ರಂದು ಹಣದ ವಿಚಾರವಾಗಿ ಥಳಿಸಿ ಬಳಿಕ ಕಾರಿನಲ್ಲಿ ಅಪಹರಿಸಿತ್ತು.
ಪ್ರಕರಣದ ಕುರಿತು ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲಿ ಐವರು ಆರೋಪಿಗಳನ್ನು ಬಾಗಲಕೋಟೆಯಲ್ಲಿ ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.
ಅಪಹರಣಕ್ಕೊಳಗಾಗಿದ್ದ ಮಿಲ್ ಮಾಲಕ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





