ಜಾನುವಾರು ಸಾಗಾಟ ಆರೋಪ: ಓರ್ವನ ಬಂಧನ
ಬೆಂಗಳೂರು, ನ. 15: ಅನುಮತಿ ಇಲ್ಲದೆ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿರುವ ಆರ್ ಎಂಸಿ ಯಾರ್ಡ್ ಠಾಣಾ ಪೊಲೀಸರು, 30 ಜಾನುವಾರುಗಳನ್ನು ಜಪ್ತಿ ಮಾಡಿದ್ದಾರೆ.
ತುಮಕೂರು ರಸ್ತೆಯ ಗೋರಗುಂಟೆಪಾಳ್ಯದ ಸಿಎಂಟಿಐ ಬಳಿ ಕಂಟೈನರ್ ವಾಹನವನ್ನು ರವಿವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಒಟ್ಟು ಮೂವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
Next Story





