ನೀರುಮಾರ್ಗ: ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಉದ್ಘಾಟನೆ

ಮಂಗಳೂರು, ನ.15: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನೀರುಮಾರ್ಗ ಪೇಟೆಯ ಹೃದಯ ಭಾಗದಲ್ಲಿ ಶಾಸಕರ ಅನುದಾನದ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣದ ಮೇಲ್ಛಾವಣಿಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ರವಿವಾರ ಉದ್ಘಾಟಿಸಿದರು.
ಬಿಜೆಪಿ ಮಂಡಲ ಮುಖಂಡರಾದ ಸಂದೀಪ್ ಪಚ್ಚನಾಡಿ, ಲಕ್ಷ್ಮಣ್ ಶೆಟ್ಟಿಗಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಪವಿತ್ರಾ ನೀರುಮಾರ್ಗ, ಮಾಜಿ ಜಿಪಂ ಸದಸ್ಯ ಮೆಲ್ವಿನ್ ಡಿಸೋಜ, ರಿಕ್ಷಾ ಪಾರ್ಕ್ ಅಧ್ಯಕ್ಷ ಪ್ರವೀಣ್ ನೊರೊನ್ಹ, ನೀರುಮಾರ್ಗ ಗ್ರಾಪಂ ಮಾಜಿ ಅಧ್ಯಕ್ಷೆ ಕಸ್ತೂರಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ,ಗ್ರಾಪಂ ಮಾಜಿ ಸದಸ್ಯರಾದ ಪುಷ್ಪರಾಜ್ ಮಾಣೂರು, ಚೇತನ್, ಉಷಾ, ಚಂದ್ರಾವತಿ, ಗುಣವತಿ, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Next Story





