ಕಲ್ಕೂರ ಪ್ರತಿಷ್ಠಾನದಿಂದ ಗೋ ಪೂಜೆ ಆಚರಣೆ

ಮಂಗಳೂರು, ನ.15: ಪೇಜಾವರ ವಿಶ್ವೇಶತೀರ್ಥರ ಸಂಸ್ಮರಣೆ ಹಾಗು ಪೇಜಾವರ ಮಠಾಧಿಶ ವಿಶ್ವ ಪ್ರಸನ್ನ ತೀರ್ಥರ ಮಾರ್ಗದರ್ಶನದಲ್ಲಿ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ರವಿವಾರ ಗೋ ಪೂಜೆ ನೆರವೇರಿಸಲಾಯಿತು.
ವೇದಮೂರ್ತಿ ರಾಜಪುರೊಹಿತ ಗಣಪತಿ ಆಚಾರ್ಯರ ನೇತೃತ್ವದಲ್ಲಿ ಡಾ.ಪ್ರಭಾಕರ ಅಡಿಗ ಕದ್ರಿಯವರು ಸ್ಥಳೀಯ ತಳಿ ಕಾಸರಗೋಡು ಗಿಡ್ಡ ದನ ಹಾಗು ಕರುವಿಗೆ ( ದೇವಕಿ-ಕೃಷ್ಣ ) ಗೋ ಪೂಜೆ ನಡೆಸಿದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಇಸ್ಕಾನ್ ಸಂಸ್ಥೆಯ ಕಾರುಣ್ಯ ಸಾಗರದಾಸ್ ಸ್ವಾಮೀಜಿ, ರಾಧಾವಲ್ಲಭದಾಸ ಸ್ವಾಮೀಜಿ, ರಾ.ಸ್ವ.ಸೇ.ಸಂಘದ ಪ್ರಮುಖ ಡಾ. ವಾಮನ ಶೆಣೈ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೊಶಿ ಮತ್ತಿತರರು ಉಪಸ್ಥಿತರಿದ್ದರು.
Next Story





