'ಓಲ್ಡ್ ಈಸ್ ಗೋಲ್ಡ್’ ಗೆಳಯರು ಕಿನ್ಯ : ಪ್ರಥಮ ಸ್ನೇಹ ಮಿಲನ

ಮಂಗಳೂರು, ನ.15: ಓಲ್ಡ್ ಈಸ್ ಗೋಲ್ಡ್’ ಗೆಳಯರು ಕಿನ್ಯ ಇದರ ಪ್ರಥಮ ಸ್ನೇಹ ಮಿಲನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ರವಿವಾರ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಸದಸ್ಯ ಎಂ.ಎನ್.ಉಸ್ತಾದ್ ದುಆಗೈದರು. ಸಂಸ್ಥೆಯ ಅಧ್ಯಕ್ಷ ಅಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಜಮಾಅತ್ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಚಾಯರ ವಳಚ್ಚಿಲ್ ‘ಆರೋಗ್ಯಕ್ಕಾಗಿ ಬೆಂಬಲ’ ಎನ್ನುವ ನಿರಂತರ ಸಮಾಜಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದನಿ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಜೀವನ ಮೌಲ್ಯದ ಬಗ್ಗೆ ವಿಶ್ಲೇಷಣೆ ನಡೆಸಿದರು.
ಕವಿಗಳಾದ ಸಂಸ್ಥೆಯ ಅಧ್ಯಕ್ಷ ಅಲಿಕುಂಞಿ ಪಾರೆ, ಮದನಿ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ., ಪತ್ರಕರ್ತ ಹಂಝ ಮಲಾರ್, ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ, ಬಶೀರ್ ಅಹ್ಮದ್ ಕಿನ್ಯ ಕವನ ವಾಚಿಸಿದರು.
ಅತಿಥಿಗಳಾಗಿ ಹಾಜಿ ಅಬೂಸ್ವಾಲಿಹ್ ಕುರಿಯಕ್ಕಾರ್, ಹಾಜಿ ಮೊಯ್ದಿನ್ ಕುಂಞಿ ಸಾಗ್ ಭಾಗವಹಿಸಿದ್ದರು. ಸಂಸ್ಥೆಯ ಸಂಚಾಲಕ ಅಬ್ದುಲ್ ಸಮದ್ ಕಿನ್ಯ ಸ್ವಾಗತಿಸಿ, ಪ್ರಸ್ತಾವಿಸಿದರು. ಗ್ರಾಪಂ ಮಾಜಿ ಸದಸ್ಯ ಹಮೀದ್ ಕಿನ್ಯ ಸಂಸ್ಥೆಯ ಪರಿಚಯ ನೀಡಿದರು.







