ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವ ಅಭ್ಯಾಸವಿಲ್ಲ: ಸಂಸದ ಪ್ರತಾಪ್ ಸಿಂಹ

ಮೈಸೂರು,ನ.15: ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವ ಅಭ್ಯಾಸ ನನಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
'ಸಂಸದೆ ಸುಮಲತಾ ಅವರು ಏನೂ ಕೆಲಸ ಮಾಡಲ್ಲ' ಎಂದು ಫೋನ್‍ನಲ್ಲಿ ಮಾತನಾಡುವಾಗ ಹೇಳಿದ್ದ ವಿಡಿಯೋ ವೈರಲ್ ಆಗಿ ಸುಮಲತಾ ಅಭಿಮಾನಿಗಳು ಪ್ರತಾಪ್ ಸಿಂಹ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ನನ್ನ ಕ್ಷೇತ್ರಕ್ಕೆ ಹೋಗದಿದ್ದರೂ, ಮಂಡ್ಯದ ಜನರ ಒಳಿತಾಗಿ ಕೆಲಸ ಮಾಡಿಸುತ್ತೇನೆ. ಯಡಿಯೂರು ಗ್ರಾಮದಲ್ಲಿ ಬ್ರಿಡ್ಜ್ ನಿರ್ಮಾಣ ಕೆಲಸಕ್ಕೆ ಕೆಲವರು ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಸಮಸ್ಯೆ ನಿವಾರಿಸೋಣ ಎಂದು ಹೇಳಿದ್ದೆ ಹೊರತು ಯಾರನ್ನೂ ಟೀಕಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Next Story





