ಮ್ಯಾನ್ಮಾರ್: ಆಂಗ್ ಸಾನ್ ಸೂ ಕಿ ನೇತೃತ್ವದ ಪಕ್ಷಕ್ಕೆ ಮತ್ತೆ ಅಧಿಕಾರದ ಚುಕ್ಕಾಣಿ

ಯಾಂಗೂನ್,ನ.15: ಮ್ಯಾನ್ಮಾರ್ ಸಂಸತ್ ಚುನಾವಣೆಯಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವದ ಮ್ಯಾನ್ಮಾರ್‌ನ ಆಡಳಿತಾರೂಢ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಾಸಿ (ಎನ್‌ಎಲ್‌ಡಿ) ಪಕ್ಷವು 920 ಸ್ಥಾನಗಳಲ್ಲಿ ಜಯಗಳಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
1117 ಸಂಸತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5639 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪ್ರತಿನಿಧಿ ಸಭೆಯಲ್ಲಿ 315 ಸ್ಥಾನಗಳು, ಮೇಲ್ಮನೆಯಲ್ಲಿ 161 ಸ್ಥಾನಗಳು , ಪ್ರಾಂತೀಯ ರಾಜ್ಯ ಅಸೆಂಬ್ಲಿಗಳಲ್ಲಿ 612 ಸ್ಥಾನಗಳು ಮತ್ತು 29 ಜನಾಂಗೀಯ ಅಲ್ಪಸಂಖ್ಯಾತ ಸ್ಥಾನಗಳಿಗೆ ನವೆಂಬರ್ 8ರಂದು ಚುನಾವಣೆ ನಡೆದಿತ್ತು.
ಆಡಳಿತಾರೂಢ ಎನ್‌ಎಲ್‌ಡಿ ಪಕ್ಷವು ಒಟ್ಟು 1106 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜನಪ್ರತಿನಿಧಿ ಸಭೆ (ಕೆಳಮನೆ)ಯ 258 ಸ್ಥಾನಗಳು, ರಾಷ್ಟ್ರೀಯತಾ ಸಭೆ (ಮೇಲ್ಮನೆ) 138 ಸ್ಥಾನಗಳಲ್ಲಿ , ರಾಜ್ಯ ಅಸೆಂಬ್ಲಿಗಳ 501 ಸ್ಥಾನಗಳಲ್ಲಿ ಹಾಗೂ ಪ್ರಾಂತೀಯ ಅಥವಾ ರಾಜ್ಯ ಅಸೆಂಬ್ಲಿಗಳ 23 ಜನಾಂಗೀಯ ಅಲ್ಪಸಂಖ್ಯಾತ ಸ್ಥಾನಗಳಲ್ಲಿ ಎನ್‌ಎಲ್‌ಡಿ ಅಭ್ಯರ್ಥಿಗಳು ಜಯಸಾಧಿಸಿದ್ದಾರೆ.
ಪ್ರತಿ ಪಕ್ಷ ಯೂನಿಯನ್ ಸಾಲಿಡಾರಿಟಿ ಹಾಗೂ ಡೆವಲೆಪ್‌ಮೆಂಟ್ ಪಾರ್ಟಿಯು 1089 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.







