ತಲವಾರು ದಾಳಿ ಪ್ರಕರಣ: ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಖಂಡನೆ

ಇಬ್ರಾಹಿಂ ಸಖಾಫಿ
ಮಂಗಳೂರು, ನ.16: ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಸಮಿತಿಯ ನೂತನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಯಾದ ಎಸ್ವೈಎಸ್ ದ.ಕ. ಜಿಲ್ಲಾ ಸದಸ್ಯ ವೆನ್ಝ್ ಅಬ್ದುಲ್ಲ ಅವರ ಮೇಲೆ ದುಷ್ಕರ್ಮಿಗಳು ನಡೆಸಿದ ತಲವಾರು ದಾಳಿಗೆ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಮೇಘ ಹಾಲ್ನಲ್ಲಿ ರವಿವಾರ ನಡೆದ ಎಸ್ವೈಎಸ್ ಕೌಂಟ್ 20 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಹಿಂದಿರುಗುವ ವೇಳೆ ಕಂದಾವರ ಮಸೀದಿಯಲ್ಲಿ ನಮಾಝ್ ಮುಗಿಸಿ ತನ್ನ ಕಾರಿನ ಬಳಿ ತೆರುತ್ತಿದ್ದಾಗ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ಅವರ ಮೇಲೆ ತಲವಾರು ದಾಳಿ ಮಾಡಿದೆ. ಈ ಕೃತ್ಯದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಘಟನೆಗೆ ಕಾರಣ ಏನೆಂಬುದನ್ನು ಕೂಲಂಕಷವಾಗಿ ತನಿಖೆ ನಡೆಸಿ ಸತ್ಯ ವಿಚಾರ ಹೊರತೆಗೆಯಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಆಗ್ರಹಿಸಿದ್ದಾರೆ.
Next Story





