ಬೆಂಗಳೂರು: ಪಬ್ ನಲ್ಲಿ ಅಗ್ನಿ ಅವಘಡ
![ಬೆಂಗಳೂರು: ಪಬ್ ನಲ್ಲಿ ಅಗ್ನಿ ಅವಘಡ ಬೆಂಗಳೂರು: ಪಬ್ ನಲ್ಲಿ ಅಗ್ನಿ ಅವಘಡ](https://www.varthabharati.in/sites/default/files/images/articles/2020/11/16/267605-1605526734.jpg)
ಬೆಂಗಳೂರು, ನ.16: ನಗರದ ಎಚ್ಎಸ್ಆರ್ ಲೇಔಟ್ನ ಹ್ಯಾಂಗ್ ಓವರ್ ಪಬ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ ಎನ್ನಲಾಗಿದೆ. ಘಟನೆ ಸಂಬಂಧ ಸ್ಥಳಕ್ಕಾಗಮಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿವೆ. ಮೇಲ್ನೋಟಕ್ಕೆ ಘಟನೆಯು ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
Next Story