ಉತ್ತರ ಪ್ರದೇಶ: ಅಪ್ರಾಪ್ತ ದಲಿತ ಸೋದರಿಯರ ಮೃತದೇಹಗಳು ಕೆರೆಯಲ್ಲಿ ಪತ್ತೆ
ಅತ್ಯಾಚಾರ ಯತ್ನ ಶಂಕೆ

ಫತೇಹಪುರ್: ಉತ್ತರ ಪ್ರದೇಶದ ಫತೇಹಪುರ್ ಜಿಲ್ಲೆಯ ಗ್ರಾಮವೊಂದರ ಕೆರೆಯಲ್ಲಿ ಇಬ್ಬರು ಅಪ್ರಾಪ್ತ ದಲಿತ ಸೋದರಿಯರ ಮೃತದೇಹಗಳು ಪತ್ತೆಯಾಗಿವೆ. ಇಬ್ಬರ ಕಣ್ಣುಗಳಲ್ಲೂ ಗಾಯದ ಗುರುತುಗಳಿವೆ. ಇಬ್ಬರ ಮೇಲೆ ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿದ ಯಾರೋ ಅವರನ್ನು ನಂತರ ಕೊಂದಿದ್ದಾರೆಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಎಂಟು ಹಾಗೂ 12 ವರ್ಷದ ಬಾಲಕಿಯರ ಮೃತದೇಹಗಳನ್ನು ಸೋಮವಾರ ಸಂಜೆ ಕೆರೆಯಿಂದ ಹೊರತೆಗೆಯಲಾಯಿತು. ಇಬ್ಬರು ಸೋದರಿಯರೂ ಮಧ್ಯಾಹ್ನ ತರಕಾರಿಗಳನ್ನು ತರಲೆಂದು ಗದ್ದೆಗೆ ತೆರಳಿದವರು ವಾಪಸಾಗಿರಲಿಲ್ಲ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.
Next Story





