ಮಿಸ್ಬಾಹ್ ಕಾಲೇಜಿನಲ್ಲಿ ಮೀಲಾದುನ್ನಬಿ
ಮಂಗಳೂರು, ನ.17: ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಕಾಲೇಜ್ ವತಿಯಿಂದ ಮೀಲಾದುನ್ನಬಿ ಕಾರ್ಯಕ್ರಮವು ಶನಿವಾರ ಮಿಸ್ಬಾಹ್ ಸಭಾಂಗಣದಲ್ಲಿ ಜರಗಿತು.
ಕೃಷ್ಣಾಪುರ ಜಮಾತಿನ ಸಂಯುಕ್ತ ಖಾಝಿ ಮೌಲನಾ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುಆಗೈದರು. ಸಂಸ್ಥೆಯ ಅಧ್ಯಕ್ಷ ಅಲ್‌ಹಾಜ್ ಬಿ.ಎಂ. ಮುಮ್ತಾಝ್ ಅಲಿ ಅಧ್ಯಕ್ಷತೆ ವಹಿಸಿದರು. ಪಂಪ್‌ವೆಲ್ ಮಸ್ಜಿದು ತಖ್ವಾ ಮುಹಝ್ಝಿನ್ ಇಬ್ರಾಹೀಂ ಗಂಗಾವಳಿ ತಂಡದ ವತಿಯಿಂದ ನಾತೆ ಶರೀಫ್ ಮತ್ತು ಮೌಲಿದ್ ಮಜ್ಲಿಸ್ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ ಮುಖ್ಯ ಪ್ರಭಾಷಣ ಮಾಡಿದರು. ಸಂಸ್ಥೆಯ ಟ್ರಸ್ಟಿ ಹಾಗೂ ಮಾಜಿ ಶಾಸಕ ಡಾ.ಬಿ.ಎ ಮೊಯ್ದಿನ್ ಬಾವ, ಉಪಾಧ್ಯಕ್ಷ ಕೆ. ಮುಹಮ್ಮದ್ ಹಾರಿಸ್, ಟಿ.ಎಚ್. ಮೆಹೆಬೂಬ್ ಅಲ್-ಜುಬೈಲ್, ಸಂಚಾಲಕ ಬಿ.ಎ. ನಝೀರ್, ಹಕೀಂ ಪಾಲ್ಕನ್ ಹಾಗೂ ಬಾವ ಫಕ್ರುದ್ದೀನ್, ಮಹಿಳಾ ಶರೀಹತ್ ಕಾಲೇಜಿನ ಉಪನ್ಯಾಸಕರಾದ ಫಾರೂಕ್ ಸಖಾಫಿ, ಅಶ್ರಫ್ ಸಖಾಫಿ,ಪ್ರಾಂಶುಪಾಲೆ ಝಾಯಿದಾ ಜಲೀಲ್ ಉಪಸ್ಥಿತರಿದ್ದರು.
ಶರೀಅತ್ ಕಾಲೇಜಿನ ಪ್ರಾಂಶುಪಾಲ ಹಬೀಬುರಹ್ಮಾನ್ ಸಖಾಫಿ ವಂದಿಸಿದರು.