ಯುವ ಕಲಾವಿದ ಸುದೀಪ್ ಶೆಟ್ಟಿ ನಿಧನ

ಉಡುಪಿ, ನ.17: ಉದಯೋನ್ಮುಖ ಯಕ್ಷಗಾನ ಕಲಾವಿದ, ಸ್ತ್ರೀಪಾತ್ರಧಾರಿ ಸುದೀಪ್ ಶೆಟ್ಟಿ (28) ಸೋಮವಾರ ಅಕಸ್ಮಿಕ ಘಟನೆಯೊಂದರಲ್ಲಿ ಮೃತಪಟ್ಟಿದ್ದಾರೆ.
ಮಂದಾರ್ತಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದ ಅಮಾಸೆಬೈಲು ಕೆಲಗ್ರಾಮದ ನಿವಾಸಿಯಾದ ಸುದೀಪ್ ಶೆಟ್ಟಿ, ನಿನ್ನೆ ಸ್ನಾನಕ್ಕೆಂದು ಹೊಳೆಗೆ ಇಳಿದವರು ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೇಗರವಳ್ಳಿ, ಸಿಗಂದೂರು ಹಾಗೂ ಮಂದಾರ್ತಿ ಮೇಳಗಳಲ್ಲಿ ಅವರು ಸುಮಾರು ಒಂದು ದಶಕದಿಂದ ಸ್ತ್ರೀವೇಷಧಾರಿಯಾಗಿ ಕಲಾ ಸೇವೆ ಮಾಡುತಿದ್ದರು.
ಅವಿವಾಹಿತರಾಗಿರುವ ಇವರು ಹೆತ್ತವರನ್ನು ಹಾಗೂ ಅಪಾರ ಕಲಾಭಿಮಾನಿ ಗಳನ್ನು ಅಗಲಿದ್ದಾರೆ. ಸುದೀಪ್ ಶೆಟ್ಟಿ ಅಕಸ್ಮಿಕ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





