ಕಾನ್ಪುರ: ಗುಂಡು ಹಾರಿಸಿಕೊಂಡು ಐಎಎಫ್ ಸಿಬ್ಬಂದಿಯ ಆತ್ಮಹತ್ಯೆ

ಕಾನ್ಪುರ(ಉ.ಪ್ರ),ನ.17: ಭಾರತೀಯ ವಾಯುಪಡೆಯ ಸಿಬ್ಬಂದಿಯೋರ್ವರು ಕರ್ತವ್ಯದಲ್ಲಿದ್ದಾಗ ತನ್ನ ಸರ್ವಿಸ್ ರೈಫಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ಚಾಕೇರಿ ಪ್ರದೇಶದಲ್ಲಿ ಸಂಭವಿಸಿದೆ.
ಕೇರಳ ಮೂಲದ ಕಾರ್ಪೊರೆಲ್ ವಿನಿಲ್ ಪಿ.ಪಾಥ್ರೋಬ್ (29) ಸೋಮವಾರ ಮಾವೈಯ್ಯೋ ಚೌಕಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತಲೆಗೆ ಗುಂಡು ಹಾರಿಸಿಕೊಂಡಿದ್ದರು. ಶಬ್ದ ಕೇಳಿ ಸಹೋದ್ಯೋಗಿಗಳು ಧಾವಿಸಿ ಬಂದು ನೋಡಿದಾಗ ಪಾಥ್ರೋಬ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. ಆತ್ಮಹತ್ಯೆಗೆ ಕಾರಣ ತಕ್ಷಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದರು.
Next Story





