ಜಯನ್ ಮಲ್ಪೆಗೆ ಜನದನಿ ಸಿರಿ ಪ್ರಶಸ್ತಿ

ಉಡುಪಿ, ನ.17: ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆಗೆ ’ಜನದನಿ ಸಿರಿ’ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ಪ್ರಶಸ್ತಿಯನ್ನು ಘೋಷಿಸಿದೆ.
ಮೂರು ದಶಕಗಳ ಕಾಲ ಕರಾವಳಿ ಹಾಗೂ ಬಯಲು ಸೀಮೆಯ ದಲಿತ ರನ್ನು ಸಂಘಟಿಸಿ ಜಾಗ್ರತಿ ಮೂಡಿಸಿ ಹೋರಾಟ ಮತ್ತು ವಿಚಾರ ಗೋಷ್ಠಿಗಳನ್ನು ನಡೆಸಿದ್ದರು. ಭಾರತೀಯ ದಲಿತ ಸಾಹಿತ್ಯ ಅಕಾಡಮಿಯ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಜಯನ್ ಮಲ್ಪೆ ಅವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಜಯನ್ ಮಲ್ಪೆಗೆ ನ.19ರಂದು ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Next Story





