ರಾಜ್ಯದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ರದ್ದು ಗೊಳಿಸಿ ಕ್ರೈಸ್ತ ಸಮುದಾಯಕ್ಕೆ ಅನ್ಯಾಯ : ಐವನ್ ಡಿಸೋಜ
ಮಂಗಳೂರು, ನ.18: ರಾಜ್ಯದ ಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ರಚನೆ ಮಾಡುವ ನಿರ್ಧಾರವನ್ನು ತಕ್ಷಣ ಪುನರ್ ಪರಿಶೀಲಿಸಿ ಕಾರ್ಯ ಗತಗೊಳಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದ 27 ಜಿಲ್ಲೆಗಳಲ್ಲಿ ಸುಮಾರು 30ಲಕ್ಷ ಜನಸಂಖ್ಯೆ ಇದೆ. ಈ ಪೈಕಿ ಸಾಕಷ್ಟು ಜನರು ಕಾರ್ಮಿಕರು, ಕೂಲಿಕಾರರು ಬಡವರಿದ್ದಾರೆ. ಅವರ ಅಭಿವೃದ್ಧಿಗಾಗಿ ಈ ಹಿಂದೆ ಮಾಡಿರುವ ತೀರ್ಮಾನ ವನ್ನು ಯಾವುದೇ ಕಾರಣ ನೀಡದೆ ರದ್ದು ಮಾಡಲಾಗಿದೆ.ಈ ನಿಗಮದ ಸ್ಥಾಪನೆಗೆ ನಿಗದಿಯಾದ ಹಣವನ್ನು ಬಿಡುಗಡೆ ಮಾಡದೆ ರಾಜ್ಯದ ಸರಕಾರ ಕ್ರೈಸ್ತ ಸಮುದಾಯಕ್ಕೆ ಅನ್ಯಾಯ ಎಸಗಿದೆ.ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ವಿನಿಯೋಗಿ ಸುವ ತೀರ್ಮಾನ ವನ್ನು ಅನುಷ್ಠಾನ ಮಾಡುವುದು ಸರಕಾರದ ಹೊಣೆಗಾರಿಕೆ. ಆದರೆ ಈ ನಡುವೆ ರಾಜಕೀಯ ಉದ್ದೇಶದಿಂದ ಕ್ರಿಶ್ಚಿಯನ್ ನಿಗಮವನ್ನು ಬಿಟ್ಟು ಕೆಲವು ನಿಗಮ ಮಾಡಲು ಹೊರಡಿದ್ದಾರೆ. ಮರಾಠ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ ಕ್ಕೆ ನಿಗಮ ಮಾಡಲು ಹೊರಟಿದ್ದಾರೆ. ಕ್ರೈಸ್ತ ಸಮುದಾಯಕ್ಕೆ ಸರಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆಸಲಾಗುವುದು ಐವನ್ ಡಿ ಸೋಜ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎ.ಸಿ. ಜಯರಾಜ್, ಲ್ಯಾನ್ಸಿ ಎಲ್ ಪಿಂಟೋ, ನವೀನ್ ಡಿ ಸೋಜ, ಸ್ಟೀಪನ್ ಮರೋಳಿ, ಕ್ರೈಸ್ತ ಮುಖಂಡರಾದ ಸ್ಟಾನ್ಲಿ ಅಲ್ವಾರೀಸ್, ಲಾರೆನ್ಸ್ ಡಿ ಸೋಜ, ಅಲಿಸ್ಟ್ ರ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.