ಕೋವಿಡ್ ಸ್ವಯಂ ಪರೀಕ್ಷೆ ಕಿಟ್‍ಗೆ ಅಮೆರಿಕಾದಲ್ಲಿ ಅನುಮತಿ
ಕೇವಲ 20 ನಿಮಿಷದಲ್ಲಿ ಫಲಿತಾಂಶ

ವಾಷಿಂಗ್ಟನ್ : ಕೇವಲ 30 ನಿಮಿಷಗಳಲ್ಲಿ ಫಲಿತಾಂಶ ನೀಡುವ ಮೊದಲ ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಅನ್ನು ಅಮೆರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್‍ಡಿಎ)ಬಳಕೆಗೆ ಮಂಗಳವಾರ ಅನುಮತಿಸಿದೆ.
ಲುಸಿರಾ ಹೆಲ್ತ್ ಅಭಿವೃದ್ಧಿ ಪಡಿಸಿರುವ ಈ ಏಕ ಬಳಕೆ ಟೆಸ್ಟ್ ಕಿಟ್ ಅನ್ನು ಗೃಹ ಬಳಕೆಗೆ ಅನುಮತಿಸಲಾಗಿದ್ದು 14 ವರ್ಷ ಮತ್ತು ಮೇಲ್ಪಟ್ಟ ಕೋವಿಡ್ ಶಂಕಿತರು ತಾವೇ ಸಂಗ್ರಹಿಸಿದ ತಮ್ಮ ಮೂಗಿನ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬಹುದು.
ಈ ಕಿಟ್ ಅನ್ನು ಆಸ್ಪತ್ರೆಗಳಲ್ಲೂ ಬಳಸಬಹುದಾಗಿದ್ದು ಪರೀಕ್ಷೆಗೆ ಒಳಗಾಗುವವರು 14 ವರ್ಷಗಳಿಗಿಂತ ಕಿರಿಯರಾಗಿದ್ದರೆ ಅವರ ಮೂಗಿನ ದ್ರವ ಮಾದರಿಯನ್ನು ಆರೋಗ್ಯ ಕಾರ್ಯಕರ್ತರೇ ಸಂಗ್ರಹಿಸಬೇಕಿದೆ.
Next Story





