ಬೈಡನ್ ಸಂಪುಟಕ್ಕೆ ಭಾರತೀಯ ಅಮೆರಿಕನ್ ವಿವೇಕ್ ಮೂರ್ತಿ, ಅರುಣ್ ಮಜುಂದಾರ್ ಸೇರ್ಪಡೆ ಸಾಧ್ಯತೆ

ವಿವೇಕ್ ಮೂರ್ತಿ,ಅರುಣ್ ಮಜುಂದಾರ್
ವಾಷಿಂಗ್ಟನ್: ಅಮೆರಿಕದ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಸೇರಿದಂತೆ ಇಬ್ಬರು ಪ್ರಖ್ಯಾತ ಭಾರತೀಯ-ಅಮೆರಿಕನ್ ಮುಂದಿನ ಬೈಡನ್-ಹ್ಯಾರಿಸ್ ಸರಕಾರದಲ್ಲಿ ಸಂಭಾವ್ಯ ಸಂಪುಟ ಆಯ್ಕೆಯಲ್ಲಿ ಸೇರಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
43ರ ವಯಸ್ಸಿನ ಮೂರ್ತಿ ಪ್ರಸ್ತುತ ಕೋವಿಡ್-19 ಸಲಹಾ ಮಂಡಳಿಯಲ್ಲಿದ್ದು, ನಿಯೋಜಿತ ಅಧ್ಯಕ್ಷ ಬೈಡನ್ ಅವರ ಉನ್ನತ ಭಾರತೀಯ-ಅಮೆರಿಕನ್ ಸಲಹೆಗಾರರಾಗಿದ್ದಾರೆ. ಮೂರ್ತಿ ಅವರು ಆರೋಗ್ಯ ಹಾಗೂ ಮಾನವ ಸೇವೆಗಳ ಕಾರ್ಯದರ್ಶಿ ಹಾಗೂ ಸ್ಟ್ಯಾನ್ ಫೋರ್ಡ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಅರುಣ್ ಮಜುಂದಾರ್ ಅವರು ಇಂಧನ ಕಾರ್ಯದರ್ಶಿ ಹುದ್ದೆಗೆ ಸಂಭಾವ್ಯ ಆಯ್ಕೆಯಾಗಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ಹಾಗೂ ಪೊಲಿಟಿಕೊ ಪತ್ರಿಕೆಗಳು ಮಂಗಳವಾರ ತನ್ನ ವರದಿಗಳಲ್ಲಿ ಬೈಡನ್ ಆಡಳಿತದ ವಿವಿಧ ಕ್ಯಾಬಿನೆಟ್ ಸ್ಥಾನಗಳಿಗೆ ಯಾರೆಲ್ಲ ಸ್ಥಾನ ಪಡೆಯುಬಹುದು ಎಂಬ ಕುರಿತು ಸಂಭಾವ್ಯ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಮೂರ್ತಿ ಹಾಗೂ ಮಜುಂದಾರ್ ಹೆಸರಿದೆ.
Next Story





