ಉಡುಪಿ: ಮಾಸ್ಕ್ ಧರಿಸದವರಿಂದ 7,400 ರೂ. ದಂಡ ವಸೂಲಿ
ಉಡುಪಿ, ನ.18: ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ನ.17ರ ಮಂಗಳವಾರ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದ 74 ಮಂದಿ ಯಿಂದ ಒಟ್ಟು 7,400 ರೂ.ದಂಡವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಈವರೆಗೆ ಒಟ್ಟು 15106 ಮಂದಿಯಿಂದ 16,69,250ರೂ. ದಂಡ ವನ್ನು ವಸೂಲಿ ಮಾಡಲಾಗಿದೆ.
ನ.17ರಂದು ನಗರ ಸ್ಥಳಿಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 1100ರೂ., ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 4 ಮಂದಿಯಿಂದ 400ರೂ., ಪೊಲೀಸ್ ಇಲಾಖೆ 49 ಮಂದಿಯಿಂದ 4900ರೂ., ಅಬಕಾರಿ ಇಲಾಖೆ 5 ಮಂದಿ ಯಿಂದ 500ರೂ. ಹಾಗೂ ಕಂದಾಯ ಇಲಾಖೆ 5 ಮಂದಿ ಯಿಂದ 500ರೂ. ವಸೂಲಿ ಮಾಡಿದೆ.
ಇದರಿಂದ ಈವರೆಗೆ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 2,25,900ರೂ., ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 2,87,000 ರೂ., ಪೊಲೀಸ್ ಇಲಾಖೆ ಒಟ್ಟು 10,81,550ರೂ., ಅಬಕಾರಿ ಇಲಾಖೆ ಒಟ್ಟು 25,700ರೂ., ಕಂದಾಯ ಇಲಾಖೆಯು ಒಟ್ಟು 49,100ರೂ. ದಂಡ ವಸೂಲಿ ಮಾಡಿವೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Next Story





