ಬಾಲಕಿಗೆ ಸ್ಕೂಟರ್ ಢಿಕ್ಕಿ
ಮಂಗಳೂರು, ನ.18: ನಗರದ ಪಾಂಡೇಶ್ವರ ಸುಭಾಶ್ ನಗರ 1ನೇ ಕ್ರಾಸ್ ರಸ್ತೆಯಲ್ಲಿ ತಾಯಿ ಮತ್ತು ಅಜ್ಜಿಯ ಜೊತೆಗೂಡಿ ನಡೆದುಕೊಂಡು ಹೋಗುತ್ತಿದ್ದ ಮೈಮುನತ್ ಆಫಿಯಾ (6) ಎಂಬಾಕೆಗೆ ಸ್ಕೂಟರ್ವೊಂದು ಢಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ.
ಆಟೊ ರಿಕ್ಷಾದಿಂದ ಇಳಿದು ಝಾರಾ ಎನ್ಕ್ಲೇವ್ ಅಪಾರ್ಟ್ಮೆಂಟ್ನೊಳಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಆಫಿಯಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸ್ಕೂಟರ್ ಸವಾರ ಡೆರಿನ್ ಡೇವಿಡ್ ವಿರುದ್ಧ ಆಫಿಯಾಳ ತಾಯಿ ಫೌಝಿಯಾ ನೀಡಿದ ದೂರಿನಂತೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story