ಚಿಕ್ಕಮಗಳೂರು ಜಿ.ಪಂ.ಅಧ್ಯಕ್ಷೆ ಸುಜಾತ ಬಿಜೆಪಿಯಿಂದ ಅಮಾನತು

ಚಿಕ್ಕಮಗಳೂರು, ನ.18: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಆದೇಶ ಹೊರಡಿಸಿದ್ದಾರೆ.
ಪಕ್ಷದ ತೀರ್ಮಾನ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿದೆ.
ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ ಸುಜಾತ ಕೃಷ್ಣಪ್ಪ ವಿರುದ್ಧ ಇಂದು ಸ್ವಪಕ್ಷಿಯ ಸದಸ್ಯರೇ ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಸಭೆಯ ಮಧ್ಯೆಯೇ ಬಿಜೆಪಿ ಸದಸ್ಯರು ಎದ್ದು ಹೊರ ನಡೆದಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸುಜಾತಾ ಅವರಿಗೆ ಪಕ್ಷ ಸೂಚನೆ ನೀಡಿತ್ತು. ಆದರೆ ರಾಜೀನಾಮೆ ನೀಡಲ್ಲ ಎಂದು ಸುಜಾತಾ ಅವರು ಪಟ್ಟುಹಿಡಿದಿದ್ದರು.
Next Story





