ಮಂಗಳೂರು : ಕಾಂಗ್ರೆಸ್ ಕಚೇರಿಯಲ್ಲಿ ದೀಪಾವಳಿ ಆಚರಣೆ

ಮಂಗಳೂರು : ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ದೀಪಾವಳಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದ ಮಾಜಿ ಶಾಸಕ ಜೆ.ಆರ್ ಲೋಬೊ ಈ ದೀಪಾವಳಿ ಹಬ್ಬವು ಸಮಾಜದಲ್ಲಿ ಕಷ್ಟದ ಬದುಕನ್ನು ಸಾಗಿಸುವ ಜನರ ಬಾಳ ಬೆಳಕಾಗಿ ಮೂಡಿ ಬರಲಿ ಆ ಮೂಲಕ ಸೌಹಾರ್ದಯುತ ಸ್ವಚ್ಛ ಸಮಾಜದ ಬೆಳಕು ಎಲ್ಲೆಡೆಯಲ್ಲಿ ಪಸರಿಸಲಿ ಎಂದರು.
ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿ, ಕಾಂಗ್ರೆಸ್ ಕಚೇರಿಯಲ್ಲಿ ಸರ್ವಧರ್ಮವರ ಜೊತೆಗೂಡಿ ಆಚರಿಸುವ ಈ ಹಬ್ಬವು ಅತೀವ ಸಂತಸ ತಂದಿದೆ. ನಾವೆಲ್ಲರೂ ಒಂದೇ ಎಂಬ ಧ್ಯೇಯವನ್ನು ತೋರಿಸಿ ಕೊಡುವ ಒಂದು ವಿಶಿಷ್ಟ ರೀತಿಯ ಆಚರಣೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ. ಎಲ್ಲರ ಬಾಳು ಬೆಳಕಾಗಲಿ ಎಂಬುವುದೇ ಕಾಂಗ್ರೆಸ್ ಪರಿಕಲ್ಪನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಅಧ್ಯಕ್ಷೆ ಶಾಂತಲಾ ಗಟ್ಟಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಘುರಾಜ್ ಕದ್ರಿ, ಕಾರ್ಪೊರೇಟರ್ ಗಳಾದ ಕೇಶವ ಮರೊಳಿ, ನವೀನ್ ಡಿಸೋಜ, ಮುಖಂಡರುಗಳಾದ ಪದ್ಮನಾಭ ಅಮಿನ್, ಸಬಿತಾ ಮಿಸ್ಕಿತ್, ರವಿ ಅಮಿನ್ , ಜೇಮ್ಸ್ ಪ್ರವೀಣ್, ಟಿ.ಸಿ ಗಣೇಶ್, ಜಾರ್ಜ್, ಹರ್ಷಿತ, ರಮಣಿ ಉಮೇಶ್ , ಮೋಹಿಣಿ ಆರ್ ಅಮಿನ್ , ಮೀನಾ ಮಾಬೆನ್ , ಮೀನಾ ಟೆಲ್ಲಿಸ್ ಮೊದಲಾದವರು ಉಪಸ್ಥಿತರಿದ್ದರು.





