ಕುತ್ತೆತ್ತೂರು: ತಾಯಿ, ಮಗ ಕಾಣೆ
ಮಂಗಳೂರು, ನ.19: ಕುತ್ತೆತ್ತೂರು ಗ್ರಾಮದ ಬಾಜಾವು ನಿಸರ್ಗ ಮನೆಯಿಂದ ನ.18ರಂದು ಶಾಬಿರಾ (36) ಮತ್ತವರ ಮಗ ಶಮ್ಲಾನ್ (13) ಎಂಬವರು ಕಾಣೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಹಮ್ಮದ್ ಅನ್ಸಾರ್ ಎಂಬವರು ನೀಡಿದ ದೂರಿನಲ್ಲಿ ತನ್ನ ಅಕ್ಕ ಶಾಬೀರಾ ತನ್ನ ಮಗನಾದ ಶಮ್ಲಾನ್ ಎಂಬಾತನನ್ನು ಕರೆದುಕೊಂಡು ತನ್ನ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲ. ಈ ಬಗ್ಗೆ ನೆರೆಮನೆ ಮತ್ತು ಪರಿಚಯಸ್ಥರ ಮನೆ, ಸಂಬಂಧಿಕರ ಮನೆಯಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
5.3 ಅಡಿ ಎತ್ತರದ ಎಣ್ಣೆ ಕಪ್ಪು ಮೈಬಣ್ಣದ, ಸಾಧಾರಣ ಶರೀರದ ಶಾಬಿರಾ ಹಳದಿ ಪ್ಯಾಂಟ್ ಮತ್ತು ಬಿಳಿ ಟಾಪ್ ಧರಿಸಿದ್ದು, ಬ್ಯಾರಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. 4.2 ಅಡಿ ಎತ್ತರದ ಕಪ್ಪು ಪ್ಯಾಂಟ್ ಮತ್ತು ಬಿಳಿ ಟಿ ಶಟ್ ಧರಿಸಿರುವ ಶಮ್ಲಾನ್‌ರನ್ನು ಕಂಡವರು ಸುರತ್ಕಲ್ ಠಾಣೆಗೆ (0824-2220540) ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
Next Story





