ಸೀರತ್ ಪ್ರಬಂಧ ಸ್ಪರ್ಧೆ; ಶಿರಸಿಯ ರಾಜೇಶ್ವರಿ ಹೆಗಡೆ ಪ್ರಥಮ, ತ್ರೀವೇಣಿ ಶಾಸ್ತ್ರಿ ದ್ವಿತೀಯ
ಭಟ್ಕಳ : ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಆಯೋಜಿಸಿದ್ದ ಉ.ಕ. ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಶಿರಸಿಯ ರಾಜೇಶ್ವರಿ ಹೆಗಡೆ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಸಂಚಾಲಕ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊನ್ನಾವರ ತಾಲೂಕಿನ ಹೇರಂಗಡಿಯ ತ್ರೀವೇಣಿ ಶಾಸ್ತ್ರಿ ದ್ವಿತೀಯಾ, ಮುರುಢೇಶ್ವರದ ಫಾತಿಮಾ ಫರ್ನಾಂಡೀಸ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಪರಮೇಶ್ವರ ಜಟ್ಟಾ ನಾಯ್ಕ, ವಿದ್ಯಾ ಭಂಡಾರಿ ಅಂಕೋಲಾ, ಗುಲಾಬಿ ನರಸಿಂಹ ದೇವಾಡಿಗ ಮುಂಡಳ್ಳಿ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ನ.22ರ ಸಂಜೆ-4.30ಕ್ಕೆ ಹೊಟೆಲ್ ರಾಯಲ್‍ಓಕ್ ಸಭಾಂಗಣದಲ್ಲಿ ಜರಗುವ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಪ್ರಯಾಣ ಭತ್ಯೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಜ.ಇ.ಹಿಂರಾಜ್ಯಘಟಕದ ಕಾರ್ಯದರ್ಶಿ ಮುಹಮ್ಮದ್‍ಕುಂಞಿ ಸಹಿಸುತ್ತಿದ್ದು, ಪ್ರೋ.ಆರ್.ಎಸ್.ನಾಯಕ, ಕಸಾಪ ಅಧ್ಯಕ್ಷ ಶಂಕರ್ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಶ ನಾಯ್ಕ, ಉ.ಕ. ಜಿಲ್ಲಾ ಕಾರ್ಯನಿತ ಪತ್ರಕರ್ತರ ಸಂಘದ ಅಧ್ಯಕ್ಷರಾ ಧಕೃಷ್ಣ ಭಟ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.