Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾತೆ ಮೇರಿಯ ಗೋಪುರದಲ್ಲಿ...

ಮಾತೆ ಮೇರಿಯ ಗೋಪುರದಲ್ಲಿ ಟಿಪ್ಪು-ಹೈದರಾಲಿಯ ಹೆಸರು..!!

​ಇಸ್ಮತ್ ಪಜೀರ್​ಇಸ್ಮತ್ ಪಜೀರ್20 Nov 2020 2:31 PM IST
share
ಮಾತೆ ಮೇರಿಯ ಗೋಪುರದಲ್ಲಿ ಟಿಪ್ಪು-ಹೈದರಾಲಿಯ ಹೆಸರು..!!

ಮಂಗಳೂರಿನಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಹತ್ತು ಕಿಲೋ ಮೀಟರ್ ಕ್ರಮಿಸಿದರೆ ಸದಾ ಜನಜಂಗುಳಿಯಿಂದ ಗಿಜಿಗಿಡುವ ಒಂದು ಪುಟ್ಟ ಪೇಟೆ ಸಿಗುತ್ತದೆ. ಬಂಟ್ವಾಳ ತಾಲೂಕಿನ ವ್ಯಾಪ್ತಿಗೊಳಪಡುವ ಆ ಪೇಟೆಯ ಹೆಸರು ಫರಂಗಿಪೇಟೆ.

ಈ ಫರಂಗಿಪೇಟೆ ಎಂಬ ಹೆಸರಿಗೊಂದು ಹಿನ್ನೆಲೆಯಿದೆ. ಬಾಸೆಲ್ ಮಿಶನ್‌ನವರು ಮಂಗಳೂರು ನಗರದ ಬಲ್ಮಠದಲ್ಲಿರುವ ಥಿಯೋಲೋಜಿಕಲ್ ಕಾಲೇಜಿನಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ನಡೆಸಿದ್ದ ವಸ್ತುಪ್ರದರ್ಶನ ಮತ್ತು ಐತಿಹಾಸಿಕ ಚಿತ್ರಗಳ ಪ್ರದರ್ಶನದಲ್ಲಿ ದಾಖಲಿಸಿದ್ದ ಪ್ರಕಾರ ಫರಂಗಿಪೇಟೆಯಲ್ಲಿ ಎರಡು‌ ಶತಮಾನಗಳ ಹಿಂದೆಯೇ ಫಿರಂಗಿಗಳನ್ನು ಸಮರಕ್ಕೆ ಸಿದ್ಧಗೊಳಿಸಿಡುವ ಸ್ಥಳವಿತ್ತಂತೆ. ಆದುದರಿಂದ ಆ ಪೇಟೆಗೆ ಫಿರಂಗಿಪೇಟೆ ಎಂಬ ಹೆಸರು ಬಂತು. ಕ್ರಮೇಣ ಅದು ಅಪಭ್ರಂಶಗೊಂಡು ಫರಂಗಿಪೇಟೆ ಆಯಿತು.

ಮಂಗಳೂರಿನಿಂದ  ಸಾಗುವ ಹೆದ್ದಾರಿಯ ಬಲಬದಿಗೆ ನೇತ್ರಾವತಿ ನದಿಯೂ , ಬಲ ಬದಿಗೆ ಗುಡ್ಡ ಬೆಟ್ಟಗಳಿಂದಾವೃತವಾದ ಒಳನಾಡೂ ಫರಂಗಿಪೇಟೆಯಲ್ಲಿದೆ. ನೇತ್ರಾವತಿಯ ತಟದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಕಪೋಚಿನ್ ಎಂಬ ವಿಶಿಷ್ಟ ಶ್ರೇಣಿಯ ಸನ್ಯಾಸಿ-ಸನ್ಯಾಸಿನಿಯರ ಪ್ರಾರ್ಥನಾ ಮಂದಿರವೊಂದಿದೆ. ಅದು ಕ್ಯಾಥೋಲಿಕ್ ಸಮುದಾಯ ಬಹುವಾಗಿ ಗೌರವಿಸುವ ಮಂದಿರವೂ ಹೌದು. ಆ ಪ್ರಾರ್ಥನಾ ಮಂದಿರದ ಹೆಸರು "St.Fedelis Friary Monte Mariano".  ಸದ್ರಿ ಮಂದಿರದ ಪ್ರವೇಶ ದ್ವಾರದ ಒಳಹೊಕ್ಕಾಗಲೇ ಮಾತೆ ಮೇರಿಯ ಮೂರ್ತಿಯಿರುವ ಗೋಪುರವೊಂದು ಕಾಣಸಿಗುತ್ತದೆ. ಆ ಗೋಪುರದಲ್ಲಿ " At the feet of this statue of Mary the soldiers of Hydar Ali and those of Tippu Sultan were lighting the candles" ಎಂದು ಬರೆದಿರುವುದನ್ನು ನಾವು ಇಂದಿಗೂ ಕಾಣಲು ಸಾಧ್ಯ. ಅರ್ಥಾತ್ " ಮೇರಿಯ ಈ ಮೂರ್ತಿಯ ಪಾದ ಭಾಗದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಸೈನಿಕರು ಮೋಂಬತ್ತಿ ಬೆಳಗಿಸುತ್ತಿದ್ದರು". 

ಇದರಿಂದ ನಾವು ತಿಳಿದುಕೊಳ್ಳಬಹುದಾದ ವಿಚಾರವೇನೆಂದರೆ ಟಿಪ್ಪು ಮತ್ತು ಹೈದರಾಲಿಯ ಸೇನೆಯಲ್ಲಿ ಧಾರಾಳವಾಗಿ ಕ್ರೈಸ್ತ ಧರ್ಮೀಯ ಸೈನಿಕರಿದ್ದರು ಅಥವಾ ಕ್ರೈಸ್ತ ನಂಬಿಕೆಗಳನ್ನು ಗೌರವಿಸುವ ಸೈನಿಕರಿದ್ದರು. ಇದು ಟಿಪ್ಪುವನ್ನು‌ ಕ್ರೈಸ್ತ ವಿರೋಧಿಯೆಂದು ಅಪಪ್ರಚಾರ ಮಾಡುವ ವರಿಗೆ ಸಮರ್ಪಕ ಉತ್ತರವೂ ಹೌದು.

ಕ್ರೈಸ್ತ ಸೈನಿಕರನ್ನಿಟ್ಟುಕೊಂಡು ಟಿಪ್ಪು ಮಂಗಳೂರು ಕ್ರೈಸರನ್ನು ಮತಾಂತರ ಮಾಡಿದರು, ಅವರ ಜೊತೆ ಧಾರ್ಮಿಕ ಕಾರಣಕ್ಕಾಗಿ ಕ್ರೂರವಾಗಿ ನಡೆದುಕೊಂಡಿದ್ದರು, ಕ್ರೈಸರ ಮಾರಣ ಹೋಮ ಮಾಡಿದ್ದರು ಎನ್ನುವುದನ್ನು ನಂಬಲು ಸಾಧ್ಯವೇ..? ಒಂದು ವೇಳೆ ಟಿಪ್ಪು ಮಂಗಳೂರು ಕ್ರೈಸ್ತರ ಜೊತೆ ಧಾರ್ಮಿಕ ಕಾರಣಕ್ಕಾಗಿ ಇವೆಲ್ಲಾ ಮಾಡಿದ್ದಿದ್ದರೆ ಅವರ ಸೈನಿಕರು ಮೇರಿಯ ಮೂರ್ತಿಗೆ ಮೋಂಬತ್ತಿ ಬೆಳಗುವುದನ್ನು ಸಹಿಸುತ್ತಿದ್ದರೇ...? ಅದಕ್ಕೆ ಟಿಪ್ಪು ಅನುವು ಮಾಡಿಕೊಡುತ್ತಿದ್ದರೇ..? ಇವಿಷ್ಟಲ್ಲದೇ ಟಿಪ್ಪು ಸದ್ರಿ ಪ್ರಾರ್ಥನಾ ಮಂದಿರಕ್ಕೆ ಸಹಾಯ ಮಾಡಿದುದರ ಬಗೆಯೂ ಸದ್ರಿ ಮಂದಿರದಲ್ಲಿ ದಾಖಲೆಗಳಿವೆ.

ಟಿಪ್ಪು ಮಂಗಳೂರಿನ ಕೆಲ ಕ್ರೈಸ್ತರನ್ನು ಶಿಕ್ಷಿಸಿರುವುದೇನೋ ನಿಜ. ಅದು ಕೇವಲ ಕ್ರೈಸ್ತರನ್ನು ಮಾತ್ರವಲ್ಲ. ಮಲಬಾರಿನ ನಾಯರರು, ಕೊಡವರು, ಮಲಬಾರಿನ ಮೆಹ್ದವಿ ಮುಸ್ಲಿಮರನ್ನೂ  ಟಿಪ್ಪು ಶಿಕ್ಷಿಸಿದ್ದಿದೆ.‌ಅದು ರಾಜಕೀಯ ಕಾರಣಕ್ಕಾಗಿಯೇ ಹೊರತು ಅದರಲ್ಲಿ ಧಾರ್ಮಿಕ ವೈರತ್ವದ ಲವಲೇಶವೂ ಇರಲಿಲ್ಲ. ಟಿಪ್ಪುವಿನ ಶತ್ರುಗಳಾದ ಬ್ರಿಟಿಷರ ಜೊತೆ ಕೈ ಜೋಡಿಸಿದವರನ್ನು ಮಾತ್ರ ಟಿಪ್ಪು ಶಿಕ್ಷಿಸಿದ್ದು. ಅಂತಹ ಸಂದರ್ಭಗಳಲ್ಲಿ ಟಿಪ್ಪು ಅವರ ಧರ್ಮ ನೋಡಿ ಶಿಕ್ಷಿಸಿದ್ದಲ್ಲ. ರಾಜಪ್ರಭುತ್ವದ ಕಾಲದಲ್ಲಿ ತನ್ನ ರಾಜ್ಯದ ವಿರುದ್ಧ ಕೆಲಸ ಮಾಡುವವರನ್ನು, ತನ್ನ ಶತ್ರುಗಳಿಗೆ ಅನುಕೂಲ ಮಾಡಿಕೊಡುವವರನ್ನು ಯಾವನೇ ರಾಜನಾದರೂ ಸಹಿಸಲು ಸಾಧ್ಯವೇ...?

share
​ಇಸ್ಮತ್ ಪಜೀರ್
​ಇಸ್ಮತ್ ಪಜೀರ್
Next Story
X