ಮಂಗಳೂರು: 'ನ್ಯೂ ಡ್ಯಾನಿಶ್ ಬ್ಯಾಂಬೂ ಹೌಸ್’ ಶುಭಾರಂಭ
ಮಂಗಳೂರು, ನ.20: ನಗರದ ಫಳ್ನೀರ್ ರಸ್ತೆಯಲ್ಲಿರುವ ಇಂದಿರಾ ಆಸ್ಪತ್ರೆಯ ಬಳಿ ಪ್ಲಾಟಿನಮ್ ಪಾಯಿಂಟ್ ಕಟ್ಟಡದಲ್ಲಿ 'ನ್ಯೂ ಡ್ಯಾನಿಶ್ ಬ್ಯಾಂಬೂ ಹೌಸ್' ಅರೇಬಿಯನ್ ಫುಡ್ ರೆಸ್ಟೋರೆಂಟ್ ಶುಕ್ರವಾರ ಶುಭಾರಂಭಗೊಂಡಿತು.
ರಾಯಲ್ ಟ್ರೀಟ್ ಮಾಲಕ ಬರಕತ್ ಅಹ್ಮದ್ ಉದ್ಘಾಟಿಸಿದರು. ನಗರದ ಕಂಕನಾಡಿಯ ರಹ್ಮಾನಿಯಾ ಜುಮಾ ಮಸ್ಜಿದ್ನ ಖತೀಬ್ ಅಬ್ದುರ್ರಹ್ಮಾನ್ ಸಅದಿ ದುಆಗೈದರು.
'ನ್ಯೂ ಡ್ಯಾನಿಶ್ ಬಾಂಬೂ ಹೌಸ್'ನ ಮಾಲಕ ಯೂಸುಫ್ ಖಲೀಲ್, ಸಹೋದರರಾದ ಹನೀಫ್, ಸತ್ತಾರ್, ಸಿದ್ದೀಕ್, ರಶೀದ್, ಪುತ್ರರಾದ ಅಬ್ದುರ್ರಹ್ಮಾನ್ ಕೈಸ್, ಕಶ್ವೀರ್, ಕಶಿಫ್, ಕಝೀನ್, ರಹ್ಮಾನಿಯಾ ಜುಮಾ ಮಸ್ಜಿದ್ನ ಅಕ್ಬರ್ ಮದನಿ, ರೆಸ್ಟೋರೆಂಟ್ ವ್ಯವಸ್ಥಾಪಕರಾದ ನಿಝಾಮ್ ಮತ್ತು ಸಫ್ವಾನ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
'ನ್ಯೂ ಡ್ಯಾನಿಶ್ ಬಾಂಬೂ ಹೌಸ್' ಅರೇಬಿಯನ್ ಫುಡ್ ರೆಸ್ಟೋರೆಂಟ್ ನಲ್ಲಿ ಬಾಂಬೂ ಬಿರಿಯಾನಿ, ಮಟ್ಕ ಬಿರಿಯಾನಿ, ಅರಬಿಕ್ ಮಲ್ಹೂತ್ ಬಿರಿಯಾನಿ, ಖಿಝಿ ಬಿರಿಯಾನಿ, ಖುಝಿ ಮಂದಿ, ಮಟನ್ ಮಂದಿ, ತಲಶ್ಯೇರಿ ಧಮ್ ಬಿರಿಯಾನಿ, ಅರೆಬಿಕ್ ಡ್ರೈ ಡಿಶ್, ಹಲೀಮ್, ಅಲ್ಫ್ಹಾಮ್, ಮಲಾಯಿ ಗ್ರಿಲ್ ಚಿಕನ್ ಮುಂತಾದ ಅನೇಕ ಬಗೆ ಬಗೆಯ ಸ್ವಾದಿಷ್ಟ ಖಾದ್ಯ ಲಭ್ಯವಿದೆ. ಅಲ್ಲದೆ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ರೊಮಾಲಿ ಕೋಕ್ಟೇಲ್ ಶವರ್ಮ, ರೊಮಾಲಿ ಕೋಕ್ಟೇಲ್ ಚೀಝ್ ಶವರ್ಮವನ್ನು ಪರಿಚಯಿಸುತ್ತಿದೆ.