ಎಂಕೆ ಸ್ಟಾಲಿನ್ ಪುತ್ರ, ನಟ ಉದಯನಿಧಿ ಬಂಧನ

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಅವರನ್ನು ತಮಿಳುನಾಡಿನ ನಾಗಪಟ್ಟಿನಮ್ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಪರ ಪ್ರಚಾರ ನಡೆಸಿದ್ದಕ್ಕೆ ಬಂಧಿಸಲಾಗಿದೆ. ಅವರು ಕೋವಿಡ್-19 ನಿಗ್ರಹಕ್ಕಾಗಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ರಾಜಕೀಯ ಸಮಾರಂಭಕ್ಕೆ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಎಂಕೆ ಯುವ ವಿಭಾಗದ ನಾಯಕನಾಗಿರುವ ಉದಯನಿಧಿ ಎಐಎಡಿಎಂಕೆ ಸರಕಾರದ ಅಸಮರ್ಪಕ ಆಡಳಿತವನ್ನು ಬಿಂಬಿಸುತ್ತಾ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ 75 ದಿನಗಳ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ವೇಳೆ ಪಕ್ಷದ ಹಿರಿಯ ನಾಯಕರು ಹಾಜರಿದ್ದರು.
Next Story





