ಹಸುಗೂಸು ಕಳವು ಪ್ರಕರಣ: ವಾಣಿ ವಿಲಾಸ್ ಆಸ್ಪತ್ರೆಗೆ ಪೊಲೀಸ್ ನೋಟಿಸ್
ಬೆಂಗಳೂರು, ನ.21: ಹಸುಗೂಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಾಣಿ ವಿಲಾಸ ಆಸ್ಪತ್ರೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ನಗರದ ವಿ.ವಿ ಪುರಂ ಪೊಲೀಸ್ ಇನ್‍ಸ್ಪೆಕ್ಟರ್ ಶಿವಶಂಕರ್ ಅವರು ನೋಟಿಸ್ ಜಾರಿ ಮಾಡಿದ್ದು, ಆಸ್ಪತ್ರೆಯ ಐಸಿಯುನಿಂದ ಮಹಿಳೆಯೋರ್ವಳು ಹಸುಗೂಸು ಕಳವು ಮಾಡಿದ್ದರಿಂದ ತನಿಖೆಗೆ ಅಗತ್ಯ ದಾಖಲಾತಿ ಒದಗಿಸುವಂತೆ ನೋಟಿಸ್‍ನಲ್ಲಿ ಸೂಚಿಸಿದ್ದಾರೆ.
ಆಸ್ಪತ್ರೆಯ 16 ಸಿಸಿಟಿವಿ ಕ್ಯಾಮೆರಾಗಳಲ್ಲಿ ಕೇವಲ 2 ಕ್ಯಾಮೆರಾಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಭದ್ರತೆ ಲೋಪದಿಂದಾಗಿ ಹಸುಗೂಸು ಅಪಹರಣವಾಗಿದೆ ಎಂದು ಶಂಕಿಸಲಾಗಿದೆ.
Next Story





