Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಸ್ತೆ ಸೌಲಭ್ಯ ಮರೀಚಿಕೆ: ಅಧಿಕಾರಿಗಳ...

ರಸ್ತೆ ಸೌಲಭ್ಯ ಮರೀಚಿಕೆ: ಅಧಿಕಾರಿಗಳ ನಡೆಗೆ ಬೇಸತ್ತು ಜಮೀನಿಗೆ ಬೆಂಕಿ ಹಚ್ಚಿದ ದಲಿತರು

ದಯಾಮರಣಕ್ಕೆ ಅನುಮತಿ ನೀಡಲು ಆಗ್ರಹ

ಕೆ.ಎಲ್.ಶಿವುಕೆ.ಎಲ್.ಶಿವು22 Nov 2020 8:14 PM IST
share
ರಸ್ತೆ ಸೌಲಭ್ಯ ಮರೀಚಿಕೆ: ಅಧಿಕಾರಿಗಳ ನಡೆಗೆ ಬೇಸತ್ತು ಜಮೀನಿಗೆ ಬೆಂಕಿ ಹಚ್ಚಿದ ದಲಿತರು

ಚಿಕ್ಕಮಗಳೂರು, ನ.22: ತಮ್ಮ ಜಮೀನುಗಳಿಗೆ ಹೋಗಿ ಕೃಷಿ ಮಾಡಲು ಅಗತ್ಯವಿದ್ದ ರಸ್ತೆ ನಿರ್ಮಿಸಿಕೊಡಲು ನಿರ್ಲಕ್ಷ್ಯ ವಹಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ನಡೆಯಿಂದ ಬೇಸತ್ತ ದಲಿತರು ತಮ್ಮ ಜಮೀನುಗಳಿಗೆ ಬೆಂಕಿ ನೀಡಿ ಸುಟ್ಟು ಹಾಕಲು ಮುಂದಾಗಿದ್ದ ಘಟನೆಯೊಂದು ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದ್ದು, ಜಿಲ್ಲಾಧಿಕಾರಿ ಮಧ್ಯಪ್ರವೇಶದಿಂದಾಗಿ ದಲಿತ ಕುಟುಂಬಗಳಿಗೆ ಸೇರಿದ ಸುಮಾರು 24 ಎಕರೆ ಕೃಷಿ ಭೂಮಿ ಬೆಂಕಿಗಾಹುತಿಯಾಗುವುದು ತಪ್ಪಿದಂತಾಗಿದೆ.

ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮರ್ಕಲ್ ಗ್ರಾಮದಲ್ಲಿ 20ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಿರುವ ದಲಿತರ ಕಾಲನಿಯೊಂದಿದೆ. ಈ ಕಾಲನಿ ನಿವಾಸಿಗಳ ಪೈಕಿ 12 ಮಂದಿಗೆ 1-3 ಎಕರೆ ಸಾಗುವಳಿ ಜಮೀನು ಇದೆ. ಆದರೆ ಈ ಜಮೀನು ಈ ದಲಿತ ಕಾನಿಯಿಂದ ಸುಮಾರು 2 ಕಿಮೀ ದೂರದಲ್ಲಿದ್ದು, ಈ ಜಮೀನುಗಳಿಗೆ ರಸ್ತೆ ಸಂಪರ್ಕದ ಸೌಲಭ್ಯ ಇಲ್ಲವಾಗಿದೆ. ಈ ಜಮೀನುಗಳು ಕಾಲನಿಯ ದಲಿತ ಕುಟುಂಬಗಳಿಗೆ 1979ರಲ್ಲಿ ಮಂಜೂರಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಈ ಜಮೀನಿಗೆ ಹೋಗಲು ರಸ್ತೆ ಇಲ್ಲವಾಗಿದ್ದು, ರಸ್ತೆ ಸಂಪರ್ಕದ ಸಮಸ್ಯೆಯನ್ನು ಸಂಬಂಧಿಸಿದ ಜನಪ್ರನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಪಂ ಗಮನಕ್ಕೂ ತಂದರೂ ಇದುವರೆಗೂ ರಸ್ತೆ ಸೌಲಭ್ಯ ಮರೀಚಿಕೆಯಾಗಿದೆ.

ಕಾಲನಿಯಿಂದ ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಸೌಲಭ್ಯ ಇಲ್ಲದ ಪರಿಣಾಮ ಜಮೀನು ಹೊಂದಿರುವ ದಲಿತ ಕುಟುಂಬಗಳ ಸದಸ್ಯರು 2 ಕಿಮೀ ದೂರದ ಜಮೀನುಗಳಿಗೆ ಕಾಲ್ನಡಿಗೆಯಲ್ಲೇ ಹೋಗಿ ಸಾಗುವಳಿ ಮಾಡುತ್ತಿದ್ದಾರೆ. ಜಮೀನು ಕೃಷಿಗೆ ಬೇಕಾದ ಗೊಬ್ಬರ ಮತ್ತಿತರ ವಸ್ತುಗಳನ್ನು ತಲೆ ಮೇಲೆ ಹೊತ್ತುಕೊಂಡು ಕೃಷಿ ಮಾಡುವಂತಹ ಪರಿಸ್ಥಿತಿ ದಲಿತರದ್ದಾಗಿದೆ. ರಸ್ತೆ ಸೌಲಭ್ಯ ಇಲ್ಲದಿರುವುದರಿಂದ ಈ ದಲಿತರಿಗೆ ಸಮರ್ಪಕವಾಗಿ ಜಮೀನು ಅಭಿವೃದ್ಧಿ ಪಡಿಸಲು ಇದುವರೆಗೂ ಸಾಧ್ಯವಾಗಿಲ್ಲ. 

ಮೇಲ್ವರ್ಗದ ವ್ಯಕ್ತಿಯಿಂದ ರಸ್ತೆ ನಿರ್ಮಾಣಕ್ಕೆ ಅಡ್ಡಿ
ರಸ್ತೆ ಸೌಲಭ್ಯಕ್ಕಾಗಿ ಸ್ಥಳೀಯ ನಿಡುವಾಳೆ ಗ್ರಾಮ ಪಂಚಾಯತ್‍ಗೆ ಅನೇಕ ಬಾರಿ ಮನವಿ ಮಾಡಿದ್ದ ಪರಿಣಾಮ ನರೇಗಾ ಯೋಜನೆಯಡಿ ಗ್ರಾಪಂ ರಸ್ತೆ ನಿರ್ಮಿಸಿಕೊಳ್ಳಲು ಕೆಲವು ವರ್ಷಗಳ ಹಿಂದೆ ಅನುದಾನ ನೀಡಿದೆ. ದಲಿತರ ಜಮೀನುಗಳಿಗೆ ಹೋಗಲು ಬೇಕಾದ ರಸ್ತೆ ನಿರ್ಮಿಸಿಕೊಳ್ಳಲು ಸರಕಾರಿ ಜಾಗ ಲಭ್ಯವಿಲ್ಲದ ಪರಿಣಾಮ 12 ದಲಿತರು ತಮ್ಮ ಜಮೀನಿನಲ್ಲಿ ರಸ್ತೆಗೆ ಅಗತ್ಯವಾಗಿದ್ದ ಜಾಗವನ್ನು ಬಿಟ್ಟುಕೊಟ್ಟಿದ್ದು, ಈ ಜಾಗದಲ್ಲಿ ನರೇಗಾ ಅನುದಾನ ಬಳಸಿಕೊಂಡು ದಲಿತರು ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮ ಸ್ವಂತ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟರೂ ಇದೇ ರಸ್ತೆಯ ನಡುವೆ ಮೇಲ್ವರ್ಗದ ವ್ಯಕ್ತಿಯೊಬ್ಬರ ಜಮೀನಿದ್ದು, ಅವರು ರಸ್ತೆಗೆ ಜಾಗ ಬಿಟ್ಟು ಕೊಡದ ಪರಿಣಾಮ ದಲಿತ ಜಮೀನುಗಳಿಗೆ ಹೋಗಲು ರಸ್ತೆ ಇದ್ದೂ ಇಲ್ಲದಂತಾಗಿದೆ. ಕಳೆದ 3 ದಶಕಗಳಿಂದ ಮೇಲ್ವರ್ಗದ ವ್ಯಕ್ತಿ ದಲಿತರ ಜಮೀನುಗಳಿಗೆ ಹೋಗಲು ಬೇಕಿದ್ದ ರಸ್ತೆಗೆ ಸುಮಾರು 50 ಅಡಿಗಳಷ್ಟು ಜಾಗ ಬಿಡದ ಪರಿಣಾಮ ಇಂದಿಗೂ ದಲಿತರು ತಮ್ಮ ಜಮೀನುಗಳಿಗೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇದೆ.

ಬೇಸತ್ತ ದಲಿತರಿಂದ ಜಮೀನು ಸುಟ್ಟು ಹಾಕುವ ನಿರ್ಧಾರ
ಈ ರಸ್ತೆ ಸಮಸ್ಯೆಯಿಂದಾಗಿ ದಲಿತರು ತಮ್ಮ ಜಮೀನನ್ನು ಪಾಳು ಬಿಡುವಂತಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ಷೇತ್ರದ ಶಾಸಕ ಸೇರಿದಂತೆ ಯಾವ ಜನಪ್ರತಿನಿದಿಗಳು, ಅಧಿಕಾರಿಗಳೂ ಮುಂದಾಗದ ಪರಿಣಾಮ ಬೇಸತ್ತು ಹೋಗಿದ್ದ ಮರ್ಕಲ್ ಗ್ರಾಮದ ದಲಿತ ಕಾಲನಿಯ ಈ ಜಮೀನುಗಳ ಮಾಲಕರು ಕಳೆದ ಎರಡು ದಿನಗಳ ಹಿಂದೆ ತಮ್ಮ ಜಮೀನುಗಳು ಬೆಂಕಿ ಹಾಕಿ ಸುಟ್ಟು ಹಾಕಲು ನಿರ್ಧರಿಸಿದ್ದು, ಅದರಂತೆ ಸೀಮೆಎಣ್ಣೆ, ಪೆಟ್ರೋಲನ್ನು ತಮ್ಮ ಜಮೀನುಗಳಿಗೆ ಸುರಿದು ಬೆಂಕಿಯನ್ನೂ ಹಚ್ಚಿದ್ದಾರೆ. ಆದರೆ ಸ್ಥಳೀಯ ಯುವಕನೋರ್ವನ ಸಮಯ ಪ್ರಜ್ಞೆಯಿಂದಾಗಿ ದಲಿತರ ಜಮೀನುಗಳು ಬೆಂಕಿಗೆ ಆಹುತಿಯಾಗುವುದು ತಪ್ಪಿದ್ದು, ರಸ್ತೆಯ ಸಮಸ್ಯೆಯನ್ನು ಜಿಲ್ಲಾಧಿಕಾರಿ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲು ಯುವಕ ದಲಿತ ಕುಟುಂಬಗಳ ಮನವೊಲಿಸಿದ್ದರಿಂದ ಆತನ ಮಾತಿಗೆ ಒಪ್ಪಿದ ದಲಿತರು ತಾವು ಜಮೀನಿಗೆ ನೀಡಿದ್ದ ಬೆಂಕಿಯನ್ನು ಆರಿಸಿದ್ದಾರೆ. 

ದಯಾಮರಣಕ್ಕೆ ಅನುಮತಿ ನೀಡಲು ಆಗ್ರಹ
ಸಚಿನ್ ಮರ್ಕಲ್ ಎಂಬ ಯುವಕ ದಲಿತರ ಸಮಸ್ಯೆ ಸೇರಿದಂತೆ ಜಮೀನಿಗೆ ಬೆಂಕಿ ಹಾಕಿದ್ದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದು, ರಸ್ತೆ ಸಮಸ್ಯೆಯಿಂದಾಗಿ ಜಮೀನು ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ರಸ್ತೆ ಇಲ್ಲದೇ ಜಮೀನಿಗೆ ಏನನ್ನೂ ತರಲಾಗುತ್ತಿಲ್ಲ. ಜಮೀನನ್ನು ಪಾಳು ಬಿಡುವಂತಾಗಿದೆ. ಜಮೀನು ಕೃಷಿ ಮಾಡಿ ಆದಾಯ ಸಂಪಾದನೆ ಮಾಡಲೂ ಸಾಧ್ಯವಾಗುತ್ತಿಲ್ಲ. ಜಮೀನುಗಳಲ್ಲಿ ಮನೆ ಕಟ್ಟಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಸರಕಾರ ತಮಗೆ ನೀಡಿರುವ ಜಮೀನನ್ನು ಹಿಂದಕ್ಕೆ ಪಡೆಯಲಿ. ಇಲ್ಲವೇ ತಮಗೆ ದಯಾಮರಣಕ್ಕೆ ಅನುಮತಿ ನೀಡಲಿ. ರಸ್ತೆ ನಿರ್ಮಾಣಕ್ಕೆ ಸ್ವಂತ ಜಾಗ ಬಿಟ್ಟುಕೊಟ್ಟಿದ್ದೇವೆ. ತಮ್ಮ ಜಮೀನುಗಳ ಮಧ್ಯೆ ಮೇಲ್ವರ್ಗದ ವ್ಯಕ್ತಿಯೊಬ್ಬರ ಜಮೀನಿದ್ದು, ಅವರು ರಸ್ತೆಗೆ ಜಾಗ ಬಿಡದ ಪರಿಣಾಮ ತಮ್ಮ ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ತಮ್ಮ ಜಮೀನುಗಳ ಪಕ್ಕದಲ್ಲೇ ಸ್ಮಶಾನದ ಜಾಗವಿದ್ದು, ಕಾಲನಿಯಲ್ಲಿ ಯಾರಾದರು ಮೃತಪಟ್ಟರೆ ಅವರನ್ನು ವಾಹನಗಳಲ್ಲಿ ಸ್ಮಶಾನಕ್ಕೆ ಸಾಗಿಸಲು ಸಾಧ್ಯವಾಗದೇ ಶವವನ್ನು ಹೊತ್ತುಕೊಂಡು ಸಾಗಿಸಬೇಕಿದೆ. ನಮಗೆ ಜಮೀನು ಇದ್ದೂ ಇಲ್ಲದಂತಾಗಿದೆ. ಈ ನರಕಯಾತನೆಯಿಂದ ಬೇಸತ್ತು ಜಮೀನಿಗೆ ಬೆಂಕಿ ಹಾಕಿ ಸುಡಲು ನಿರ್ಧಾರ ಮಾಡಿದ್ದೇವೆಂದು ನೊಂದ ದಲಿತರು ಹೇಳುವ ದೃಶ್ಯಗಳನ್ನು ಸಚಿನ್ ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಅದನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯ ವಾಟ್ಸ್ ಆ್ಯಪ್ ನಂಬರ್ ಗೆ ಕಳಿಸಿದ್ದಾನೆ.

ಸಮಸ್ಯೆ ಪರಿಹರಿಸಲು ತಹಶೀಲ್ದಾರ್ ಗೆ ಡಿಸಿ ತಾಕೀತು
ದಲಿತರು ತಮ್ಮ ಜಮೀನುಗಳಿಗೆ ಬೆಂಕಿ ಹಾಕಿದ್ದ ವಿಡಿಯೋ ಸೇರಿದಂತೆ ಸಚಿನ್ ಮರ್ಕಲ್ ತಮ್ಮ ವಾಟ್ಸ್ ಆ್ಯಪ್ಗೆ ಕಳಿಸಿದ್ದ ವಿಡಿಯೋಗಳನ್ನು ನೋಡಿದ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ವಾಟ್ಸ್ ಆ್ಯಪ್ ಮೂಲಕವೇ ಸಚಿನ್‍ಗೆ ಸಮಸ್ಯೆ ಪರಿಹರಿಸುವ ಸಂದೇಶ ರವಾನಿಸಿದ್ದು, ಕೆಲ ಗಂಟೆಗಳ ಬಳಿಕ ಮೂಡಿಗೆರೆ ತಹಶೀಲ್ದಾರ್ ಮರ್ಕಲ್ ಗ್ರಾಮಕ್ಕೆ ಹೋಗಿದ್ದಲ್ಲದೇ, ಬೆಳಗಿನಿಂದ ಸಂಜೆವರೆಗೆ ಗ್ರಾಮದಲ್ಲೇ ಉಳಿದುಕೊಂಡು ದಲಿತರ ಅಹವಾಲು ಆಲಿಸಿ, ಸಮಸ್ಯೆ ಪರಿಶೀಲಿಸಿದ್ದಾರೆ. ಬಳಿಕ ದಲಿತರ ಜಮೀನುಗಳಿಗೆ ಹೋಗಲು ಅಡ್ಡಿಯಾಗಿದ್ದ ಮೇಲ್ವರ್ಗದ ವ್ಯಕ್ತಿಯ ಮನವೊಲಿಸಿ ಅವರಿಂದ ರಸ್ತೆಗೆ ಜಾಗ ಬಿಡಲು ಒಪ್ಪಿಸಿದ್ದಲ್ಲದೇ, ಶೀಘ್ರ ರಸ್ತೆ ರಸ್ತೆ ನಿರ್ಮಿಸುವ ಭರವಸೆಯನ್ನೂ ನೀಡಿದ್ದಾರೆ.

ಸಮಸ್ಯೆ ಪರಿಹರಿಸಿದ ವಿಡಿಯೋ ಡಿಸಿಗೆ ಕಳಿಸಲೇಬೇಕೆಂದ ತಹಶೀಲ್ದಾರ್
ರಸ್ತೆ ಸಮಸ್ಯೆ ಪರಿಹರಿಸುವಂತೆ ಡಿಸಿಯಿಂದ ಸೂಚನೆ ಪಡೆದು ಮೂಡಿಗೆರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಮೂಡಿಗೆರೆ ತಹಶೀಲ್ದಾರ್ ರಮೇಶ್, ರಸ್ತೆಗೆ ಅಡ್ಡಿಯಾಗಿದ್ದ ವ್ಯಕ್ತಿಯ ಮನವೊಲಿಸಿ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಬಳಿಕ ಸಮಸ್ಯೆ ಪರಿಹರಿಸಿರುವ ಬಗ್ಗೆ ದಲಿತರು, ಮೇಲ್ವರ್ಗದ ವ್ಯಕ್ತಿಯ ಹೇಳಿಕೆಗಳನ್ನು ವಿಡಿಯೋ ಮಾಡಿಸಿದ ತಹಶೀಲ್ದಾರ್, ಅದನ್ನು ಯುವಕ ಸಚಿನ್ ಅವರಿಂದಲೇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ವಾಟ್ಸ್ ಆ್ಯಪ್ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ನಂತರ ಯುವಕ ವಿಡಿಯೋವನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿದ್ದಾನೆ. 

ಪ್ರಧಾನಿ ಕಚೇರಿ ಪತ್ರಕ್ಕೂ ಸ್ಪಂದಿಸದ ಅಧಿಕಾರಿಗಳು
ಮರ್ಕಲ್ ಗ್ರಾಮದಲ್ಲಿರುವ ದಲಿತರ ಈ ರಸ್ತೆ ಸಮಸ್ಯೆಯ ಬಗ್ಗೆ ಕಾಲನಿಯ ನಿವಾಸಿ ಕೆಂಚಯ್ಯ ಎಂಬವರ ಮಗಳಾದ ವಿನೀತಾ ಎಂಬ ಬಾಲಕಿ 4 ವರ್ಷಗಳ ಹೊಂದಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಳು. ಬಾಲಕಿಯ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಹಿಂಬರಹ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳು ದಲಿತರ ಈ ರಸ್ತೆಯ ಸಮಸ್ಯೆಯನ್ನು ಬಗೆಹರಿಸಬೇಕೆಂದು ಪ್ರಧಾನಿ ಕಚೇರಿಯಿಂದ ಸೂಚನೆ ಬಂದಿತ್ತು. ಆದರೆ ಪ್ರಧಾನಿ ಪತ್ರಕ್ಕೂ ಸ್ಥಳೀಯ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದೇ ನಿರ್ಲಕ್ಷ್ಯ ವಹಿಸಿರುವುದೂ ಬೆಳಕಿಗೆ ಬಂದಿದೆ. 

ಗ್ರಾಮದ ದಲಿತರಿಗೆ 1979ರಲ್ಲಿ ಜಮೀನು ಮಂಜೂರಾಗಿದೆ. ಅಲ್ಲಿಂದ ಇಲ್ಲಿಯವರೆಗೂ ದಲಿತರ ಜಮೀನುಗಳಿಗೆ ಹೋಗಲು ರಸ್ತೆ ಇರಲಿಲ್ಲ. ಮರ್ಕಲ್ ಗ್ರಾಮದ ಮುಖ್ಯ ರಸ್ತೆಯಿಂದ ದಲಿತರ ಕಾಲನಿಗೆ ಹೋಗಲು ಸಿಡುವಾಳೆ ಗ್ರಾಪಂ ನರೇಗಾ ಯೋಜನೆಯಡಿ ಅನುದಾನ ನೀಡಿದ್ದು, ಈ ಅನುದಾನದಡಿಯಲ್ಲಿ ಮುಖ್ಯರಸ್ತೆಯಿಂದ ದಲಿತರ ಜಮೀನುಗಳ ವರೆಗೆ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿತ್ತು. ರಸ್ತೆಗೆ ದಲಿತರು ತಮ್ಮ ಸ್ವಂತ ಜಾಗ ಬಿಟ್ಟಿದ್ದಾರೆ. ಆದರೆ ಮೇಲ್ವರ್ಗದ ವ್ಯಕ್ತಿಯೊಬ್ಬರು ರಸ್ತೆಗೆ ಜಾಗ ಬಿಟ್ಟುಕೊಡದ ಪರಿಣಾಮ ರಸ್ತೆ ನಿರ್ಮಾಣ ಕೆಲಸ ಅಪೂರ್ಣವಾಗಿದೆ. ದಲಿತರ ಜಮೀನುಗಳಿಗೆ ಹೋಗುವ ರಸ್ತೆಯ ಮಧ್ಯೆ ಮೇಲ್ವರ್ಗದ ವ್ಯಕ್ತಿ ಜಮೀನಿದ್ದು, ಅವರು ಜಾಗ ಬಿಡದಿದ್ದರಿಂದ ದಲಿತರ ಪಾಲಿಗೆ ಈ ಜಮೀನುಗಳು ಇದ್ದೂ ಇಲ್ಲದಂತಾಗಿತ್ತು. ಈ ಕಾರಣಕ್ಕೆ ನೊಂದು ಬೆಂದ ದಲಿತರು ತಮ್ಮ ಜಮೀನುಗಳಿಗೆ ಬೆಂಕಿ ಇಡಲು ಮುಂದಾಗಿದ್ದರು. ಈ ವಿಷಯ ನನಗೆ ತಿಳಿದು ಸ್ಥಳಕ್ಕೆ ಹೋದಾಗ ದಲಿತರು ತಮ್ಮ ಜಮೀನುಗಳಿಗೆ ಬೆಂಕಿ ಹಚ್ಚಿದ್ದರು. ಕೂಡಲೇ ಅದನ್ನೆಲ್ಲ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಡಿಸಿ ಗಮನಕ್ಕೆ ತರುವುದಾಗಿ ಮನವೊಲಿಸಿದ್ದರಿಂದ ದಲಿತರು ಬೆಂಕಿ ಆರಿಸಿದರು. ಈ ವೇಳೆ ಅವರು ದಯಾಮರಣಕ್ಕೆ ಅನುಮತಿ ಕೊಡಿಸಿ ಎಂದು ಕೇಳಿಕೊಂಡಿದ್ದು, ಇದರಿಂದ ತನಗೆ ಬೇಜಾರಾಗಿತ್ತು. ಕೂಡಲೇ ವಿಡಿಯೋಗಳನ್ನು ಡಿಸಿಗೆ ಕಳಿಸಿದೆ. ಕೂಡಲೇ ಜಿಲ್ಲಾಧಿಕಾರಿ ವಿಡಿಯೋ ನೋಡಿ ಸಮಸ್ಯೆ ಪರಿಹರಿಸಲು ತಹಶೀಲ್ದಾರ್ ಗೆ ಸೂಚನೆ ನೀಡಿರುವುದಾಗಿ ಸಂದೇಶ ಕಳಿಸಿದ್ದರು. ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಬಂದು ಸಂಜೆವರೆಗೂ ಗ್ರಾಮದಲ್ಲೇ ಇದ್ದು ರಸ್ತೆಗೆ ಜಾಗ ಬಿಡಿಸಿಕೊಟ್ಟಿದ್ದಾರೆ. 
- ಸಚಿನ್, ಮರ್ಕಲ್ ಗ್ರಾಮದ ನಿವಾಸಿ

share
ಕೆ.ಎಲ್.ಶಿವು
ಕೆ.ಎಲ್.ಶಿವು
Next Story
X