ವಂಚನೆ ಪ್ರಕರಣ: ಆರೋಪಿಯ ಸೆರೆ
ಬೈಂದೂರು, ನ.22: ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿ ಹಲವು ಮಂದಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣದ ಆರೋಪಿಯನ್ನು ಬೈಂದೂರು ಪೊಲೀಸರು ನ.22ರಂದು ಬಂಧಿಸಿದ್ದಾರೆ.
ಬೈಂದೂರು ಪಡುವರಿ ನಿವಾಸಿ ರಿತೇಶ್ ಪಟ್ವಾಲ್(25) ಬಂಧಿತ ಆರೋಪಿ. ಈತ ಯಳಜಿತ್ ನಿವಾಸಿ ಸತೀಶ್, ಮಹೇಶ್, ವಿಜಯ್, ಗೌತಮ್, ನಂದೀಶ, ಸಚಿನ್ ಹಾಗೂ ಇತರರಿಗೆ ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಒಟ್ಟು ಎಂಟು ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬೈಂದೂರು ಪೊಲೀಸರು, ಆರೋಪಿ ರಿತೇಶ್‌ನನ್ನು ಬಂಧಿಸಿ, ನ.22ರಂದು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Next Story