ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ
ಕುಂದಾಪುರ, ನ.22: ಕನ್ಯಾನ ಗ್ರಾಮದ ಗಿಳಿಯಾರ್ ಮಕ್ಕಿ ಎಂಬಲ್ಲಿ ನ.21 ರಂದು ಅಕ್ರಮ ಮದ್ಯ ಮರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕನ್ಯಾನ ಕೂಡ್ಲು ನಿವಾಸಿಗಳಾದ ಶೇಖರ ಪೂಜಾರಿ ಯಾನೆ ಶೇಷು(45) ಹಾಗೂ ಮಂಜುನಾಥ(42) ಬಂಧಿತ ಆರೋಪಿಗಳು. ಇವರಲ್ಲಿದ್ದ 2458.50 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story