10 ವಿದ್ಯಾರ್ಥಿಗಳು, 6 ಉಪನ್ಯಾಸಕರಿಗೆ ಕೊರೋನ ಸೋಂಕು ದೃಢ
ವಿಜಯಪುರ: ಮಂಗಳವಾರದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮ ಕಾಲೇಜುಗಳು ಆರಂಭವಾಗಿದ್ದು, ಜಿಲ್ಲೆಯ 10 ವಿದ್ಯಾರ್ಥಿಗಳು ಹಾಗೂ 6 ಉಪನ್ಯಾಸಕರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರದಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ 3541 ವಿದ್ಯಾರ್ಥಿಗಳು ಕೊರೋನ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ 10 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ ಎಂದವರು ತಿಳಿಸಿದ್ದಾರೆ.
ಇವರೊಟ್ಟಿಗೆ ಜಿಲ್ಲೆಯ ನಾನಾ ಕಾಲೇಜುಗಳ 283 ಉಪನ್ಯಾಸಕರೂ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ 6 ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಕಾರಿ ತಿಳಿಸಿದ್ದಾರೆ.
Next Story