Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಈ ವರ್ಷ ಶಾಲೆ ತೆರೆಯದಿರಲು ರಾಜ್ಯ ಸರಕಾರದ...

ಈ ವರ್ಷ ಶಾಲೆ ತೆರೆಯದಿರಲು ರಾಜ್ಯ ಸರಕಾರದ ನಿರ್ಧಾರ ಆಘಾತಕಾರಿ : ಎಐಎಸ್ಎಫ್

ವಾರ್ತಾಭಾರತಿವಾರ್ತಾಭಾರತಿ23 Nov 2020 12:20 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಈ ವರ್ಷ ಶಾಲೆ ತೆರೆಯದಿರಲು ರಾಜ್ಯ ಸರಕಾರದ ನಿರ್ಧಾರ ಆಘಾತಕಾರಿ : ಎಐಎಸ್ಎಫ್

ಮಂಗಳೂರು : ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷವಿಡೀ ಶಾಲೆಗಳನ್ನು ತೆರೆಯದಿರಲು ರಾಜ್ಯ ಸರಕಾರವು ನಿರ್ಧರಿಸಿರುವುದು ಆಘಾತಕಾರಿ ಯಾಗಿದ್ದು, ಈ ಕೂಡಲೇ ಅದನ್ನು ಹಿಂಪಡೆಯಬೇಕೆಂದೂ, ಶಾಲೆಗಳನ್ನು ಕೂಡಲೇ ತೆರೆಯಲು ವ್ಯವಸ್ಥೆಗಳನ್ನು ಮಾಡಬೇಕೆಂದೂ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ ಎಫ್) ಒತ್ತಾಯಿಸಿದೆ.

ಕೊರೋನ ನೆಪದಲ್ಲಿ ಕಳೆದ 9 ತಿಂಗಳಿಂದ ಶಾಲೆಗಳನ್ನು ಮುಚ್ಚಿರುವುದು ಮಕ್ಕಳ ಶೈಕ್ಷಣಿಕ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಅತಿ ಗಂಭೀರವಾದ ಪರಿಣಾಮಗಳನ್ನುಂಟು ಮಾಡಲಿವೆ. ಈಗಾಗಲೇ ರಾಜ್ಯದ ಮಕ್ಕಳು ಅಪೌಷ್ಠಿಕತೆಗೆ ಈಡಾಗಿದ್ದಾರೆನ್ನುವ ವರದಿಗಳು ಪ್ರತಿನಿತ್ಯವೂ ಬರುತ್ತಿದ್ದು, ಆನ್ ಲೈನ್ ಶಿಕ್ಷಣದಿಂದ ಹೆಚ್ಚಿನ ಮಕ್ಕಳು, ಅದರಲ್ಲೂ ಬಡವರ್ಗಗಳ ಮಕ್ಕಳು, ವಂಚಿತರಾಗಿರುವ ಬಗ್ಗೆ, ಬಗೆಬಗೆಯ ಕಷ್ಟಗಳಿಗೀಡಾಗಿರುವ ಬಗ್ಗೆಯೂ ವರದಿಗಳಾಗುತ್ತಲೇ ಇವೆ.

ಕೊರೋನ ಸೋಂಕಿನ ಹರಡುವಿಕೆಯು ಈಗಾಗಲೇ ಇಳಿಮುಖವಾಗುತ್ತಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿತರಾಗಿರುವ ಜನರಲ್ಲಿ ಮಕ್ಕಳ ಸಂಖ್ಯೆಯು ಅತ್ಯಲ್ಪವಾಗಿರುವುದು ಮತ್ತು ಕೊರೋನ ಸೋಂಕಿನಿಂದ ಆಸ್ಪತ್ರೆಗಳಲ್ಲಿ ದಾಖಲಾಗುವವರಲ್ಲಿ ಮಕ್ಕಳ ಸಂಖ್ಯೆಯು ಬೆರಳೆಣಿಕೆಯಷ್ಟೂ ಇಲ್ಲದಿರುವುದು ಸ್ಪಷ್ಟವಾಗಿದೆ. ಈ ಕುರಿತಾದ ಎಲ್ಲಾ ಮಾಹಿತಿಯೂ ಸರಕಾರದ ಬಳಿಯಿದ್ದು, ಅದನ್ನು ಯಥಾವತ್ತಾಗಿ ಕೂಡಲೇ ಜನರ ಮುಂದಿಡಬೇಕೆಂದು ಒತ್ತಾಯಿಸುತ್ತೇವೆ ಮತ್ತು ಆ ಮೂಲಕ ಜನರಲ್ಲಿ ಧೈರ್ಯ ತುಂಬಬೇಕೆಂದು ಒತ್ತಾಯಿಸುತ್ತೇವೆ.

ಕೊರೋನದಿಂದ ಸಮಸ್ಯೆಗೀಡಾಗಬಲ್ಲ ಮತ್ತು ಅದನ್ನು ಎಲ್ಲರಿಗೂ ಹರಡಬಲ್ಲ ಹಿರಿವಯಸ್ಕರು ಮತ್ತು ಅನ್ಯರೋಗಗಳಿರುವ ವಯಸ್ಕರನ್ನು ಎಲ್ಲೆಡೆ ಓಡಾಡಲು ಬಿಟ್ಟಿರುವಾಗ ಕೊರೋನದಿಂದ ಸಮಸ್ಯೆಗಳಾಗದೆ ಇರುವ ಮತ್ತು ಕೊರೋನವನ್ನು ಹರಡುವಲ್ಲಿ ಅತಿ ನಗಣ್ಯವಾದ ಪಾತ್ರವನ್ನು ವಹಿಸುವ ಮಕ್ಕಳನ್ನು ಹೀಗೆ ಶಾಲೆಗಳಿಂದ ದೂರವಿಟ್ಟು ಮನೆಯೊಳಗೆ ಬಂಧಿಸಿಡುವುದು ತೀರಾ ಅವೈಜ್ಞಾನಿಕವೂ, ಅನ್ಯಾಯವೂ ಆಗಿದೆ. ಶಾಲೆಗಳನ್ನು ಮುಚ್ಚಿದ್ದರಿಂದ ಕೊರೋನ ಸೋಂಕನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದೀಗ ರಾಜ್ಯದಲ್ಲೇ ಸಾಬೀತಾಗಿದೆ ಮತ್ತು ಶಾಲೆಗಳನ್ನು ತೆರೆಯುವುದರಿಂದ ಕೊರೋನ ಹರಡುವುದಕ್ಕೆ ಕಾರಣವಾಗುವುದಿಲ್ಲ ಎನ್ನುವುದು ಈಗಾಗಲೇ ಶಾಲೆಗಳನ್ನು ತೆರೆದಿರುವ ಹಲವು ದೇಶಗಳಿಂದ ಸಾಬೀತಾಗಿದೆ. ರಾಜ್ಯದಲ್ಲಿ ಈಗಾಗಲೇ ನಡೆಸಲಾಗಿರುವ 10ನೆ, 12ನೆ ಹಾಗೂ ಇತರ ಪದವಿ ತರಗತಿಗಳ ಪರೀಕ್ಷೆಗಳಿಂದ, ಮತ್ತು ಪ್ರವೇಶ ಪರೀಕ್ಷೆಗಳಿಂದ ಯಾರಿಗೂ ಸಮಸ್ಯೆಗಳಾಗಿಲ್ಲ ಎನ್ನುವುದೂ ಸ್ಪಷ್ಟವಾಗಿದೆ. ಆದ್ದರಿಂದ ಕೊರೋನ ನಿಯಂತ್ರಣ ಮತ್ತು ಅದರ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ಮಕ್ಕಳ ಮೇಲೆ ವರ್ಗಾಯಿಸಿ ಅವರ ಭವಿಷ್ಯವನ್ನೂ, ಸಮಗ್ರ ಆರೋಗ್ಯವನ್ನೂ ಕೆಡಿಸುವುದು ಯಾವ ದೃಷ್ಟಿಯಿಂದಲೂ ನ್ಯಾಯೋಚಿತವಲ್ಲ.

''ಸರಕಾರದ ಇಂದಿನ ನಿರ್ಧಾರವನ್ನು ನಾವು ಖಂಡಿಸುತ್ತೇವೆ ಮತ್ತು ಅದನ್ನು ಈ ಕೂಡಲೇ ಹಿಂಪಡೆದು, ಕೊರೋನ ನಿಭಾವಣೆಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ, ಮಕ್ಕಳನ್ನು ಕೊರೋನ ನಿಯಂತ್ರಣದ ಹೆಸರಲ್ಲಿ ಬಲಿಪಶುಗಳನ್ನಾಗಿ ಮಾಡದೇ, ಶಾಲೆಗಳನ್ನು ಈ ಕೂಡಲೇ ತೆರೆಯಬೇಕೆಂದು ಬಲವಾಗಿ ಒತ್ತಾಯಿಸುತ್ತೇವೆ.''

-ಜ್ಯೋತಿ .ಕೆ,

ಎಐಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರು

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X