ಪಡುಬಿದ್ರಿ ಬೀಚ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ
ಪಡುಬಿದ್ರಿ : ಪಡುಬಿದ್ರಿಯ ಕರಾವಳಿ ಸ್ಟಾರ್ಸ್ ನಡಿಪಟ್ನ ಹಾಗೂ ಬ್ಲೂ ಫ್ಲಾಗ್ ಬೀಚ್ ಎಂಡ್ ಪಾಯಿಂಟ್ ಜಂಟಿ ಆಶ್ರಯದಲ್ಲಿ ನಮ್ಮ ಪರಿಸರ ಸ್ವಚ್ಛ ಪರಿಸರ ಅಭಿಯಾನದಡಿ ರವಿವಾರ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಪಡುಬಿದ್ರಿ ಬೀಚ್‍ನಲ್ಲಿ ನಡೆಯಿತು. ಬ್ಲೂ ಫ್ಲಾಗ್ ಬೀಚ್ನ ಪ್ರಬಂಧಕ ವಿಜಯ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಪು ವಿಶ್ವ ಹಿಂದೂ ಪರಿಷತ್ನ ಸಹಕಾರ್ಯದರ್ಶಿ ನಿತೇಶ್ ಎರ್ಮಾಳ್, ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಸಂಸ್ಥೆಯ ಅಧ್ಯಕ್ಷ ಕಿರಣ್ ಕರ್ಕೇರ, ಕೋಶಾಧಿಕಾರಿ ಅಕ್ಷಯ್ ಕೋಟ್ಯಾನ್ ಹಾಗೂ ಸರ್ವ ಸದಸ್ಯರು ಮತ್ತು ಬೀಚ್ ಸ್ವಚ್ಛತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
Next Story