ಈ ದೇಶದಲ್ಲಿ ಇನ್ನು ಗುಂಡು ಹಾರಿಸಿ, ವಿಷಗಾಳಿ ಪ್ರಯೋಗಿಸಿ ಮರಣ ದಂಡನೆ
ವಾಶಿಂಗ್ಟನ್, ನ. 28: ಅಮೆರಿಕದಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೈದಿಗಳ ಶಿಕ್ಷೆಯನ್ನು ಜಾರಿಗೊಳಿಸುವ ಇನ್ನೂ ಹಲವು ವಿಧಾನಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ನಿರ್ಗಮನ ಸರಕಾರ ಮೂಲ ವಿಧಾನಗಳ ಪಟ್ಟಿಗೆ ಸೇರಿಸಿದೆ.
ಕಾನೂನು ಇಲಾಖೆಯು ಸದ್ದಿಲ್ಲದೆ ಮರಣ ದಂಡನೆಯನ್ನು ಜಾರಿಗೊಳಿಸುವ ವಿಧಾನಗಳಿಗೆ ತಿದ್ದುಪಡಿ ತರುತ್ತಿದೆ. ಇನ್ನು ಮುಂದೆ ಕೈದಿಗಳಿಗೆ ಕೇವಲ ಮಾರಕ ಇಂಜೆಕ್ಷನ್ಗಳನ್ನು ಕೊಟ್ಟು ಮರಣ ದಂಡನೆ ಜಾರಿಗೊಳಿಸಬೇಕಾಗಿಲ್ಲ. ಗುಂಡು ಹಾರಿಸಿ ಮತ್ತು ವಿಷಗಾಳಿ ಪ್ರಯೋಗಿಸಿಯೂ ಮರಣ ದಂಡನೆಯನ್ನು ಜಾರಿಗೊಳಿಸಬಹುದಾಗಿದೆ.
ನೂತನ ನಿಯಮಗಳು ಡಿಸೆಂಬರ್ 24ರಿಂದ ಜಾರಿಗೆ ಬರಲಿವೆ.
Next Story