ಕಾಲೇಜು ಆರಂಭವಾದ ಬಳಿಕ 220 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ. 29: ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಿ ಸುಮಾರು 15 ದಿನಗಳೇ ಕಳೆದಿದ್ದು, ಈ ನಡುವೆ ನ.16ರಿಂದ 29ರವರೆಗೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ನಡೆಸಿದ ಕೊರೋನ ಪರೀಕ್ಷೆಯಲ್ಲಿ 220 ಜನರಿಗೆ ಸೋಂಕು ದೃಢಪಟ್ಟಿದೆ.
ಇದರಿಂದ, ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು ಹೆದರುತ್ತಿದಾರೆ. ಕಾಲೇಜು ಆರಂಭವಾಗಿ ಅರ್ಧ ತಿಂಗಳು ಕಳೆದರೂ ತರಗತಿಗಳು ಮಾತ್ರ ಬಣಗುಟ್ಟುತ್ತಿವೆ. 8 ವಲಯಗಳಲ್ಲೂ ಪರೀಕ್ಷೆ ಮಾಡಲಾಗುತ್ತಿದ್ದು, ರಾಜರಾಜೇಶ್ವರಿನಗರದಲ್ಲೇ ಅತೀ ಹೆಚ್ಚು ಸೋಂಕಿತ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.
ಬಿಬಿಎಂಪಿ 8 ವಾರ್ಡ್ ಗಳ ವಿವರ: ಆರ್ಆರ್ ನಗರ ವಲಯ-51 ಜನರಿಗೆ ಸೋಂಕು, ಪೂರ್ವ ವಲಯ- 39, ಪಶ್ಚಿಮ ವಲಯ- 35, ಯಲಹಂಕ ವಲಯ- 33, ದಕ್ಷಿಣ ವಲಯ- 29, ದಾಸರಹಳ್ಳಿ ವಲಯ- 20., ಬೊಮ್ಮನಹಳ್ಳಿ ವಲಯ- 7, ಮಹದೇವಪುರ ವಲಯ-6 ಜನರಿಗೆ ಸೋಂಕು ದೃಢಪಟ್ಟಿದೆ.
Next Story