ರೆಡ್‌ಕ್ರಾಸ್ ಪದಾಧಿಕಾರಿಗಳ ಆಯ್ಕೆ
ಉಡುಪಿ, ನ.30: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಆಡಳಿತ ಮಂಡಳಿಯ ಸಭೆಯು ಸಂಸ್ಥೆಯ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನ.28ರಂದು ಉಡುಪಿ ರೆಡ್‌ಕ್ರಾಸ್ ಭವನದಲ್ಲಿ ಜರಗಿತು.
ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಿ. ಜಗದೀಶ್ ಸೂಚನೆಯ ಮೇರೆಗೆ ನೂತನ ಕಾರ್ಯದರ್ಶಿ ಯಾಗಿ ಕೆ.ಜಯ ರಾಮ ಆಚಾರ್ಯ ಸಾಲಿಗ್ರಾಮ, ಖಜಾಂಚಿಯಾಗಿ ಅರವಿಂದ ನಾಯಕ್ ಅಮ್ಮುಂಜೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ಕೆ.ಸನ್ಮತ್ ಹೆಗ್ಡೆ ಅವರ್ನು ಆಯ್ಕೆ ಮಾಡಲಾಯಿತು.
ರಮಾದೇವಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಮಿತಿಯ ನಿರ್ದೇಶಕರಾಗಿ, ಡಾ.ರಾಮಚಂದ್ರ ಕಾಮತ್‌ರನ್ನು ಡಿ.ಡಿ.ಆರ್.ಸಿ ಸಮಿತಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಇತರ ಉಪಸಮಿತಿ ಗಳನ್ನು ಹಿಂದಿನಂತೆ ಮುಂದುವರೆಸುವಂತೆ ನಿರ್ಣಯಿಸಲಾಯಿತು.
Next Story