ದ.ಕ.: 27 ಮಂದಿಗೆ ಕೊರೋನ ಸೋಂಕು, 46 ಮಂದಿ ಗುಣಮುಖ; ಓರ್ವ ಮೃತ್ಯು
![ದ.ಕ.: 27 ಮಂದಿಗೆ ಕೊರೋನ ಸೋಂಕು, 46 ಮಂದಿ ಗುಣಮುಖ; ಓರ್ವ ಮೃತ್ಯು ದ.ಕ.: 27 ಮಂದಿಗೆ ಕೊರೋನ ಸೋಂಕು, 46 ಮಂದಿ ಗುಣಮುಖ; ಓರ್ವ ಮೃತ್ಯು](https://www.varthabharati.in/sites/default/files/images/articles/2020/11/30/269398-1606749986.jpg)
ಮಂಗಳೂರು, ನ.30: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೋರ್ವ ಬಲಿಯಾಗಿದ್ದಾರೆ. 27 ಮಂದಿಗೆ ಸೋಂಕು ತಗುಲಿದ್ದು, 46 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿನ 31,923 ಸೋಂಕಿತರ ಪೈಕಿ 30,622 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ಗೆ 713 ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳು ಹಾಗೂ ಮನೆಗಳಲ್ಲಿ 588 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 14,876 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 16,00,022 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
Next Story