ಮುಲ್ಕಿ: ಬಪ್ಪ ನಾಡು ಸೇತುವೆ ಬಳಿ ಟೆಂಪೋ ಪಲ್ಟಿ ಓರ್ವ ಗಂಭೀರ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಟೆಂಪೋ ಒಂದರ ಟಯರ್ ಸ್ಪೋಟಗೊಂಡು ಪಲ್ಟಿಯಾಗಿ ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುರತ್ಕಲ್ ಸಮೀಪದ ಕುಳಾಯಿ ಮನದೀಪ್ ಮಾರ್ಬಲ್ಸ್ ಶೋರೂಮ್ ನಿಂದ ಮಾರ್ಬಲ್ಸ್ ಹೇರಿಕೊಂಡು ಬರುತ್ತಿದ್ದ ಟೆಂಪೋ ಬಪ್ಪನಾಡು ಸೇತುವೆ ಬಳಿಯಲ್ಲಿ ಟಯರ್ ಸ್ಪೋಟಗೊಂಡು ಪಲ್ಟಿಯಾಗಿದೆ.
ಈ ಸಂದರ್ಭ ಟೆಂಪೋದಲ್ಲಿದ್ದ ಚಾಲಕ ಪಾರಾಗಿದ್ದು, ಮೂವರು ಉತ್ತರ ಭಾರತ ಮೂಲದ ಕಾರ್ಮಿಕರಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ರಭಸಕ್ಕೆ ಟೆಂಪೋ ಜಖಂ ಗೊಂಡಿದ್ದು ಟೆಂಪೋದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮಾರ್ಬಲ್ ಗೆ ಹಾನಿಯಾಗಿದೆ.
ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Next Story





