Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಳ್ಳಾಲ ಬೋಟು ಅವಘಡ :...

ಉಳ್ಳಾಲ ಬೋಟು ಅವಘಡ : ದುರಂತಕ್ಕೀಡಾದವರೆಲ್ಲ ಕುಟುಂಬದ ಆಧಾರಸ್ತಂಭ

ವಾರ್ತಾಭಾರತಿವಾರ್ತಾಭಾರತಿ1 Dec 2020 9:17 PM IST
share
ಉಳ್ಳಾಲ ಬೋಟು ಅವಘಡ : ದುರಂತಕ್ಕೀಡಾದವರೆಲ್ಲ ಕುಟುಂಬದ ಆಧಾರಸ್ತಂಭ

ಮಂಗಳೂರು, ಡಿ.1: ಪರ್ಸಿನ್ ಬೋಟ್ ದುರಂತದಲ್ಲಿ ಮೃತಪಟ್ಟವರು ಹಾಗೂ ನಾಪತ್ತೆಯಾದವರು ಕಡುಬಡವರು. ಇವರನ್ನೇ ಆ ಕುಟುಂಬಗಳು ನೆಚ್ಚಿಕೊಂಡಿದ್ದವು. ಎಲ್ಲ ಹಿನ್ನೆಲೆಯಲ್ಲೂ ಇವರೇ ಆ ಕುಟುಂಬಗಳ ಆಧಾರ ಸ್ತಂಭವಾಗಿದ್ದರು ಎನ್ನುವುದು ಆಯಾ ಮೀನುಗಾರರ ನೆರೆಹೊರೆಯವರ ಆಂತರ್ಯದಿಂದ ಬರುವ ಮಾತುಗಳಾಗಿವೆ.

ಮೃತ ಬೊಕ್ಕಪಟ್ಣ ಪಾಂಡುರಂಗ ಸುವರ್ಣ ಮಧ್ಯವಯಸ್ಕರು. ಮನೆಯಲ್ಲಿ ಕಡುಬಡತನವಿದ್ದು, ಓರ್ವ ಪುತ್ರ ಇದ್ದು, ಕಾಲೇಜು ವಿದ್ಯಾರ್ಥಿ. ಪ್ರತಿದಿನ ದುಡಿದರೇ ತುತ್ತಿನ ಅನ್ನಕ್ಕೆ ದಾರಿಯಾಗುತ್ತದೆ ಎನ್ನುವುದು ಹತ್ತಿರದಿಂದ ಕಂಡವರ ಅಭಿಪ್ರಾಯ. ಇನ್ನು ಬೊಕ್ಕಪಟ್ಣ ಪ್ರೀತಂ ಅವಿವಾಹಿತ. ಈತ ಹೊರದೇಶದಲ್ಲಿದ್ದ. ಲಾಕ್‌ಡೌನ್ ಬಳಿಕ ಊರಿಗೆ ವಾಪಸಾಗಿದ್ದ. ಮರಳಿ ಬೋಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನಾಪತ್ತೆಯಾದ ಚಿಂತನ್ ಕೂಡ ಅವಿವಾಹಿತ. ಈತನ ಮನೆಯ ಆರ್ಥಿಕ ಸ್ಥಿತಿಯೂ ಕಷ್ಟಕರವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾಪತ್ತೆಯಾದ ಕಸಬ ಬೆಂಗ್ರೆ ನಿವಾಸಿ ಮುಹಮ್ಮದ್ ಅನ್ಸರ್ ಮುಸ್ತಫಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಮನೆಗೂ ಇವರೇ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ಇವರು ಈ ಮೊದಲು ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿ ಕುಟುಂಬ ಸಲಹುವಷ್ಟು ವೇತನ ಸಿಗದ ಹಿನ್ನೆಲೆ ಮೀನುಗಾರಿಕಾ ಕಾರ್ಮಿಕನಾಗಿ ದುಡಿಯುತ್ತಿದ್ದ.

ಕಳೆದ ಎರಡು ಮೂರು ಸಾರಿ ಆಳ ಸಮುದ್ರಕ್ಕೆ ತೆರಳುವ ಬೋಟುಗಳ ಜೊತೆ ಅನ್ಸರ್ ಕೂಡ ಹೋಗುತ್ತಿದ್ದ. ಅದರಿಂದ ಬರುವ ಆದಾಯದಿಂದಲೇ ಮನೆಯನ್ನು ನಡೆಸುತ್ತಿದ್ದ ಎಂದು ಹತ್ತಿರದ ಸಂಬಂಧಿಗಳು ಮಾಹಿತಿ ನೀಡಿದ್ದಾರೆ.

ಮೀನುಗಾರಿಕೆಗೆ ಸೋಮವಾರ ನಸುಕಿನ ಜಾವ ತೆರಳಿದ್ದ ಅನ್ಸರ್ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮಗಳ ಜೊತೆ ಮಾತನಾಡಿದ್ದ. ಮನೆಗೆ ಬೇಗನೇ ವಾಪಸಾಗುವುದಾಗಿ ಹೇಳಿದ್ದ ಮಾತುಗಳನ್ನು ಕುಟುಂಬಸ್ಥರು ಕಣ್ಣೀರಿಡುತ್ತಾ ಉಸುರಿದರು. ಅನ್ಸರ್ ನಾಪತ್ತೆಯಾದ ವಿಷಯವು ಪತ್ನಿಯ ಗಮನಕ್ಕೆ ಬರುತ್ತಿದ್ದಂತೆ ಅವರು ಮೂರ್ಛೆ ಹೋಗಿದ್ದರು.

ಕಸಬ ಬೆಂಗ್ರೆಯ ಮುಹಮ್ಮದ್ ಹಸೈನಾರ್‌ಗೆ ಇಬ್ಬರು ಮಕ್ಕಳಿದ್ದಾರೆ. ಇವರು ಕೂಡ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಾಲ್ವರು ಸಹೋದರಿಯರ ಮದುವೆ ಮಾಡಿದ್ದರು. ಬಳಿಕ ಬಾಡಿಗೆ ಮನೆಯಲ್ಲೇ ಇದ್ದರು. ದಿನಗೂಲಿಯಿಂದ ಬದುಕು ಸವೆಸುತ್ತಿದ್ದರು. ಇನ್ನೋರ್ವ ಕಸಬ ಬೆಂಗ್ರೆಯ ಝಿಯಾವುಲ್ಲಾ ಎಂಬವರಿಗೂ ನಾಲ್ವರು ಮಕ್ಕಳಿದ್ದಾರೆ. ಹೀಗೆ ಮೃತಪಟ್ಟವರು ಹಾಗೂ ನಾಪತ್ತೆಯಾದವರು ಬಡತನದಲ್ಲೇ ಬೇಯುತ್ತಿದ್ದರು. ಜೀವನದ ಬಂಡಿ ಸಾಗಿಸಲು ಜೀವ ಪಣಕ್ಕಿಟ್ಟು ಸಾಗರದ ಒಡಲಲ್ಲಿ ಆಹಾರದ ಹುಡುಕಾಟದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X