ಹೆಜಮಾಡಿಯಲ್ಲಿ ಜೂಜಾಟ: 15 ಮಂದಿ ಆರೋಪಿಗಳು ಸೆರೆ
ಪಡುಬಿದ್ರಿ : ಹೆಜಮಾಡಿಯ ಹೊಟೇಲೊಂದರ ಹಿಂಬದಿ ಜೂಜಾಟ ನಡೆಯುತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರು ಮಂಗಳೂರಿನ ಕದ್ರಿಯ ಅಜಿತ್ ಕುಮಾರ್, ಊರ್ವಾ ಅಶೋಕ್ ನಗರದ ರಾಯ್ ಡಯಾಸ್, ಸುರತ್ಕಲ್‍ನ ಕಾಂತೇಪುರಿ ದೇವಸ್ಥಾನದ ಬಳಿಯ ಮುಹಮ್ಮದ್, ಕೃಷ್ಣಾಪುರದ ಶಾಲೆ ಬಳಿಯ ಇಮ್ರಾನ್, ಜೋಕಟ್ಟೆ ತೋಕೂರಿನ ಜಲೀಲ್ ಜೋಕಟ್ಟೆ, ಪಾಲಿಗೇರದ ತಿಲಕನಗರದ ಮೊಹಮ್ಮದ್ ಅನ್ವರ್, ಜಯನಗರ ಬಜಾಲ್‍ಗುಡ್ಡೆಯ ದೇವದಾಸ್, ಕಾವೂರಿನ ನಾಗೇಶ್, ಕುಳಾಯಿ ಸದಾಶಿವನಗರದ ಜಗದೀಶ್, ಕೆಎಸ್ ರಾವ್ ನಗರದ ಶರೀಫ್, ಬೈಕಂಪಾಡಿ ಚಿತ್ರಾಪುರ ಬಳಿಯ ನಿವಾಸಿ ಪ್ರತಾಪ್, ಪೇಜಾವರ ಕೆಂಜಾರು ಗ್ರಾಮದ ರಾಜೇಶ್, ಬೋಳಾರ್ ಎಮ್ಮೆಕೆರೆಯ ಅಶ್ರಫ್, ಮಂಗಳಾದೇವಿಯ ಸತೀಶ್ ಶೆಟ್ಟಿ, ಬರ್ಕೆಯ ಚೇತನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ 66ರ ಸಾರ್ವಜನಿಕ ಹಾಡಿ ಜಾಗದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಜೂಜಾಟಕ್ಕೆ ಬಳಸಿದ್ದ ಪರಿಕರಗಳನ್ನು ಹಾಗೂ ನಗದು 1,17,110 ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.





