ಐಎಸ್ ಎಲ್: ಮುಂಬೈ ಸಿಟಿಗೆ ಭರ್ಜರಿ ಜಯ

ವಾಸ್ಕೊ: ಆಡಮ್ ಫೋಂಡ್ರೆ ಅವರ ಅವಳಿ ಗೋಲುಗಳ ನೆರವಿನಿಂದ ಮುಂಬೈ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್( ಐಎಸ್ ಎಲ್)ನಲ್ಲಿ ಈಸ್ಟ್ ಬಂಗಾಳದ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ 600ನೇ ವೃತ್ತಿಪರ ಪಂದ್ಯವನ್ನಾಡಿದ ಆಡಮ್ ಪೋಂಡ್ರೆ ಅವರು 20ನೇ ಹಾಗೂ 48ನೇ ನಿಮಿಷ(ಪೆನಾಲ್ಟಿಕಾರ್ನರ್)ಗಳಲ್ಲಿ ಗೋಲು ಗಳಿಸಿದರೆ, ಹೆರ್ಮಾನ್ ಸಂಟಾನ(58ನೇ ನಿಮಿಷ) ಏಕೈಕ ಗೋಲು ಗಳಿಸಿ ಮುಂಬೈ ಸಿಟಿ 3-0 ಗೋಲುಗಳ ಅಂತರದಿಂದ ಜಯ ಸಾಧಿಸಲು ನೆರವಾದರು.
Next Story





