ಕಾರ್ಪೊರೇಶನ್ ಬ್ಯಾಂಕ್ ಮಾಜಿ ಮ್ಯಾನೇಜರ್ ಕೆ. ಶೇಷಪ್ಪ ನಿಧನ
![ಕಾರ್ಪೊರೇಶನ್ ಬ್ಯಾಂಕ್ ಮಾಜಿ ಮ್ಯಾನೇಜರ್ ಕೆ. ಶೇಷಪ್ಪ ನಿಧನ ಕಾರ್ಪೊರೇಶನ್ ಬ್ಯಾಂಕ್ ಮಾಜಿ ಮ್ಯಾನೇಜರ್ ಕೆ. ಶೇಷಪ್ಪ ನಿಧನ](https://www.varthabharati.in/sites/default/files/images/articles/2020/12/2/269622-1606895694.jpg)
ಮಂಗಳೂರು : ಇತ್ತೀಚೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯದ ಜೊತೆ ವಿಲೀನಗೊಂಡ ಕಾರ್ಪೊರೇಶನ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ 2011ರಲ್ಲಿ ನಿವೃತ್ತರಾಗಿದ್ದ ಕೆ. ಶೇಷಪ್ಪ ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಮಂಗಳವಾರ ನಿಧನರಾದರು.
ಅವರಿಗೆ 69 ವರ್ಷ ವಯಸ್ಸಾಗಿತ್ತು.
ಅವರು ಅನೇಕ ವರ್ಷಗಳ ಕಾಲ ಬ್ಯಾಂಕಿನ ಅಧಿಕಾರಿ ಸಂಘಟನೆಯ ಉಪಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಬಳ್ಳಾಲ್ ಬಾಗಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಶೇಷಪ್ಪ ನವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story