ಮಾದಕ ವಸ್ತು ವಿರುದ್ಧ ಸಿಸಿಬಿ ಕಾರ್ಯಾಚರಣೆ: ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ

ಬೆಂಗಳೂರು, ಡಿ.2: ಮಾದಕ ವಸ್ತು ಮಾರಾಟ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ರಾಹುಲ್ ಹಾಗೂ ದರ್ಶನ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 50 ಲಕ್ಷ ಮೌಲ್ಯದ ಮಾದಕ 1000 ಎಲ್‍ಎಸ್‍ಡಿ ಕಾಗದ ತುಣುಕುಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳಿಬ್ಬರು ಪೋಲೆಂಡ್‍ನಿಂದ ಡ್ರಗ್ಸ್ ತರಿಸುತ್ತಿದ್ದು, ನಗರದಲ್ಲಿ ಕೆಲ ಯುವಕರು ಮಾದಕ ವಸ್ತುಗಳ ದಾಸರಾಗಿ ಪೊಲೀಸರ ಕಣ್ತಪ್ಪಿಸಿ ಮಾದಕ ವಸ್ತು ತಂದು ಸೇವನೆ ಹಾಗೂ ಪೆಡ್ಲಿಂಗ್ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಬ್ಬರು ಡಾರ್ಕ್‍ನೆಟ್ ಮೂಲಕ ಡ್ರಗ್ಸ್ ಆಮದು ಮಾಡಿಕೊಂಡು, ತಮಗೆ ಬೇಕಾದ ಗಿರಾಕಿಗಳಿಗೆ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿದ್ದರು ಗೊತ್ತಾಗಿದೆ ಎಂದು ತಿಳಿಸಿದರು.
Next Story





