ವಿವಿಧ ಕಾಮಗಾರಿ: ವಾಹನ ಸಂಚಾರ ನಿಷೇಧ
ಉಡುಪಿ, ಡಿ.2: ಉಡುಪಿ ನಗರಸಭಾ ವ್ಯಾಪ್ತಿಯ ಗುಂಡಿಬೈಲು ರಸಿಕ ಬಾರ್ ನಿಂದ ದೊಡ್ಡಣಗುಡ್ಡೆ ಜುಮಾದಿಕಟ್ಟೆವರೆಗೆ ಮ್ಯಾನ್‌ಹೋಲ್ ಸೋರಿಕೆಯಾಗುತ್ತಿ ರುವುದರಿಂದ ದುರಸ್ಥಿಪಡಿಸಲು ಹಾಗೂ ಒಳಚರಂಡಿ ಪೈಪ್‌ಲೈನ್ ಬದಲಾವಣೆ ಮಾಡಲು ರಸ್ತೆ ಅಗೆಯಬೇಕಾಗಿರುವುದ ರಿಂದ, ಡಿ.3ರಿಂದ 2021ರ ಜನವರಿ 2ರವರೆಗೆ ಒಂದು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿ ಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





