ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ 85ರಲ್ಲಿ ಮುನ್ನಡೆ
ಹೈದರಾಬಾದ್: ತೀವ್ರ ಪೈಪೋಟಿಯ ನಿರೀಕ್ಷೆ ಮೂಡಿಸಿದ್ದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಜಿಎಚ್ಎಂಸಿ)ಚುನಾವಣೆಯ ಮತ ಎಣಿಕೆಯು ಶುಕ್ರವಾರ ಬೆಳಗ್ಗೆ 8ಕ್ಕೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಭಾರತೀಯ ಜನತಾ ಪಕ್ಷ(ಬಿಜೆಪಿ) 85 ವಾರ್ಡ್ಗಳಲ್ಲಿ ಮುನ್ನಡೆಯಲ್ಲಿದೆ. ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) 30 ವಾರ್ಡ್ಗಳಲ್ಲಿ ಮುನ್ನಡೆಯಲ್ಲಿದ್ದರೆ, ಅಸದುದ್ದೀನ್ ಉವೈಸಿಯ ಎಐಎಂಐಎಂ ಪಕ್ಷ 16 ವಾರ್ಡ್ಗಳಲ್ಲಿ ಲೀಡ್ನಲ್ಲಿದೆ.
ಮಹಾನಗರಪಾಲಿಕೆಯಲ್ಲಿ ಒಟ್ಟು 150 ವಾರ್ಡ್ಗಳಿವೆ. ಮಹಾನಗರ ಪಾಲಿಕೆಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿಯ ಪ್ರಮುಖ ನಾಯಕರು ಈ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು.
Next Story