ಭಾರತದಲ್ಲಿ ಒಟ್ಟು ಕನಿಷ್ಠ ವೇತನ ಪಾಕಿಸ್ತಾನಕ್ಕಿಂತ ಕಡಿಮೆ: ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.4: ಕಳೆದ ವರ್ಷ ಪಾಕಿಸ್ತಾನ,ಶ್ರೀಲಂಕಾ ಮತ್ತು ನೇಪಾಳಗಳಿಗೆ ಹೋಲಿಸಿದರೆ ಭಾರತದಲ್ಲಿ ಒಟ್ಟು ಕನಿಷ್ಠ ವೇತನವು ಕಡಿಮೆಯಾಗಿತ್ತು ಎಂದು ವಿಶ್ವಸಂಸ್ಥೆಯ ಜಾಗತಿಕ ಕಾರ್ಮಿಕ ಸಂಘಟನೆ (ಐಎಲ್ಒ)ಯು ತನ್ನ ಜಾಗತಿಕ ವೇತನ ವರದಿ 2021ರಲ್ಲಿ ಹೇಳಿದೆ.
ಭಾರತದಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭ 40 ದಿನಗಳ ಮೊದಲ ಎರಡು ಹಂತಗಳಲ್ಲಿ ಹೆಚ್ಚುಕಡಿಮೆ ಯಾವುದೇ ಕಾರ್ಮಿಕರು ವೇತನಗಳನ್ನು ಪಡೆದಿರಲಿಲ್ಲ. ಅಸಂಘಟಿತ ಕ್ಷೇತ್ರಗಳ ಉದ್ಯೋಗಿಗಳು ತಮ್ಮ ವಾರ್ಷಿಕ ಗಳಿಕೆಯಲ್ಲಿ ಶೇ.22.6ಷ್ಟು ನಷ್ಟವನ್ನು ಅನುಭವಿಸಿದ್ದರು ಎಂದಿರುವ ವರದಿಯು ‘ಮೀಡಿಯನ್ ವ್ಯಾಲ್ಯೂ(ಎಂವಿ)’ ಅಥವಾ ಕನಿಷ್ಠ ವೇತನದ ಸರಣಿಯಲ್ಲಿನ ನಡುವಿನ ಮೊತ್ತವನ್ನು ಪರಿಗಣಿಸಿದೆ.
ಕಳೆದ ವರ್ಷ ಮಾಸಿಕ ಕನಿಷ್ಠ ವೇತನದ ಜಾಗತಿಕ ಎಂವಿ 9,720 ರೂ.ಆಗಿತ್ತು. ಭಾರತದಲ್ಲಿ ಅದು 4,300 ರೂ. ಆಗಿದ್ದರೆ ಪಾಕಿಸ್ತಾನ,ನೇಪಾಳ,ಶ್ರೀಲಂಕಾ ಮತ್ತು ಚೀನಾಗಳಲ್ಲಿ ಅನುಕ್ರಮವಾಗಿ 9,820 ರೂ.,7920 ರೂ.,ಶ್ರೀಲಂಕಾದಲ್ಲಿ 4,940 ರೂ. ಮತ್ತು ಚೀನಾದಲ್ಲಿ 7,060 ರೂ.ಆಗಿತ್ತು ಎಂದು ವರದಿಯು ತಿಳಿಸಿದೆ.





