ಪತ್ನಿ ಜೊತೆ ಜಗಳ ಮಾಡಿ ಬಳಿಕ ನೇಣಿಗೆ ಶರಣಾದ ಪತಿ

ಬೆಂಗಳೂರು, ಡಿ.5: ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ಮಾಡಿಕೊಂಡ ಪತಿ ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಕೆರೆಯ ಬಳಿ ನಡೆದಿದೆ.
ಮಧುರನಹೊಸಹಳ್ಳಿಯ ಮಾರಪ್ಪ(38) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ರಾತ್ರಿ ಪತ್ನಿಯೊಂದಿಗೆ ಮಾರಪ್ಪ ಜಗಳ ಮಾಡಿದ್ದಾನೆ. ತದನಂತರ, ವಿಷಯ ತಿಳಿದ ಪತ್ನಿಯ ಮನೆಯವರು ರಾತ್ರಿಯೇ ಆಕೆಯನ್ನು ತವರು ಮನೆಗೆ ಕೆರೆದೊಯ್ದಿದ್ದಾರೆ. ಇದರಿಂದ ನೊಂದ ಪತಿಯು ದೊಡ್ಡಬೆಳವಂಗಲ ಕೆರೆಯಂಗಳದ ಬಳಿ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





