ಚಿನ್ನದ ಮೇಲೆ ನಕಲಿ ಸೀಲು: ನಾಲ್ವರ ಬಂಧನ

ಬೆಂಗಳೂರು, ಡಿ.5: ಚಿನ್ನವನ್ನು ಕರಗಿಸಿ ಬಿಸ್ಕೆಟ್‍ಗಳಾಗಿ ಪರಿವರ್ತಿಸಿಕೊಂಡು ಇದರ ಶುದ್ಧತೆಯ ನಗ್ಗೆ ನಕಲಿ ಸೀಲುಗಳನ್ನು ಹಾಕಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಿಖಿಲ್(18), ಗೌರವ್(19), ಗೌರವ್ ಪಡ್ನೀಸ್(18), ತನ್ವೀರ್ ಶೇಖ್(18) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಹಲಸೂರು ಗೇಟ್‍ನಲ್ಲಿನ ಕೆಂಪಣ್ಣ ಲೇನ್‍ನ ಅಂಗಡಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಸರಕಾರವನ್ನು ವಂಚಿಸಿ ಅಪಾರ ಪ್ರಮಾಣದ ಚಿನ್ನವನ್ನು ಕರಗಿಸಿ ಬಿಸ್ಕೆಟ್ ಮಾಡಿ ಚಿನ್ನ ಶುದ್ಧತೆಯ ನಕಲಿ ಸೀಲ್‍ಗಳನ್ನು ಹಾಕಿ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿಯಾಧರಿಸಿ ದಾಳಿ ನಡಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರಿಂದ 1 ಕೆಜಿ 477 ಗ್ರಾಂ ಚಿನ್ನ, 98 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದ ಅವರು ಹೇಳಿದರು.
Next Story





