ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ: ದೂರು
ಮಲ್ಪೆ : ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಕನ್ನರ್ಪಾಡಿಯ ನವೀನ್ ಪುರುಷೋತ್ತಮ್ ಆಚಾರ್ಯ (45) ವಂಚಿರುವ ಆರೋಪಿ. ಪಾವತಿಸಿದ ಹಣಕ್ಕೆ ಪ್ರತಿ ತಿಂಗಳು ಲಾಭಾಂಶ ನೀಡುವ ನವೀನ್ ಮಾತನ್ನು ನಂಬಿ, ಪಡುಬಿದ್ರೆ ನಂದಿಕೂರಿನ ನಿರಂಜನ್, ಅವರ ತಾಯಿ ತಲಾ ಒಂದು ಲಕ್ಷ ರೂ., ಶ್ರೀಕರ ಜಿ.ಆರ್., ರಘುರಾಮ್, ಗೀತಾ ರಾವ್ ತಲಾ 2 ಲಕ್ಷ ರೂ., ಶಂಕರ ರಾವ್ 4 ಲಕ್ಷ ರೂ., ರಾಘವೇಂದ್ರ ಪೆಜ ತ್ತಾಯ 2.30 ಲಕ್ಷ ರೂ. ಹಣವನ್ನು ನ.2ರಂದು ನವೀನ್ ಖಾತೆಗೆ ಹಾಕಿದ್ದರು. ಆದರೆ ಆರೋಪಿ ಆ ಹಣಕ್ಕೆ ಲಾಭಾಂಶ ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
ಆರೋಪಿಯು ನಿರಂಜನ್ ಎನ್. ಅವರಿಗೆ 4,50,000ರೂ.ಗೂ ಅಧಿಕ ಹಣ ಪಡೆದು ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





